ದೇಶದಲ್ಲಿ ಮದ್ಯ ಮತ್ತು ಮಾದಕವಸ್ತು ಬಳಕೆದಾರರ ಸಂಖ್ಯೆ 7.32 ಕೋಟಿ

Update: 2017-03-14 13:03 GMT

ಹೊಸದಿಲ್ಲಿ,ಮಾ.14: ಭಾರತದಲ್ಲಿ ಅಂದಾಜು 7.32 ಕೋಟಿ ಜನರು ಮದ್ಯ ಮತ್ತು ಮಾದಕವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಆಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ 2000-01ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿ ತಿಳಿಸಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ಸಮೀಕ್ಷೆಯನ್ನು ನಡೆಸಿದ್ದು, 6.25 ಕೋ.ಜನರು ಮದ್ಯ ಮತ್ತು 1.07 ಜನರು ಮಾದಕವಸ್ತುಗಳನ್ನು ಬಳಸುತ್ತಿದ್ದರು. 2000-01ರ ನಂತರ ಇಂತಹ ಇನ್ನೊಂದು ಸಮೀಕ್ಷೆ ನಡೆದಿಲ್ಲ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದರು.

2016ರಲ್ಲಿ ಭಾರತದಲ್ಲಿಯ ಕಾನೂನು ಜಾರಿ ಸಂಸ್ಥೆಗಳು 46,873.052 ಕೆ.ಜಿ.ಮೆಥಾಕ್ವಾಲೋನ್ ವಶಪಡಿಕೊಂಡು ಎಂಟು ವಿದೇಶಿಯರು ಸೇರಿದಂತೆ 20 ಜನರನ್ನು ಬಂಧಿಸಿವೆ. ಈ ಮಾದಕ ದ್ರವ್ಯಕ್ಕೆ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಆಹಿರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News