ಯುವಕ ತರಗತಿಯಲ್ಲಿ ಬೆಂಕಿಹಚ್ಚಿ ಕೊಂದ ಲಕ್ಷ್ಮೀಗೆ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮಸ್ಥಾನ
Update: 2017-03-18 12:21 IST
ಕೋಟ್ಟಯಂ, ಮಾ.18: ಗಾಂಧಿನಗರ ಸ್ಕೂಲ್ ಆಫ್ ಮೆಡಿಕಲ್ ಎಜುಕೇಶನ್(ಎಸ್‌ಎಂಇ)ನ ತರಗತಿಯಲ್ಲಿ ಯುವಕನೊಬ್ಬ ಬೆಂಕಿ ಹಚ್ಚಿ ಮೃತಪಟ್ಟ ಕೆ. ಲಕ್ಷ್ಮೀ (21)ಯ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.ಮೂರನೆ ವರ್ಷದ ಫಿಸಿಯೊಥೆರಪಿಯಲ್ಲಿ ಲಕ್ಷ್ಮಿ ಪ್ರಥಮಸ್ಥಾನ ಪಡೆದು ತೇರ್ಗಡೆಯಾಗಿದ್ದಾಳೆ.
ಹರಿಪ್ಪಾಡ್ ಚಿಂಙಲಿ ಶಂಕರ ಮಂಗಲಂ ಕೃಷ್ಣಕುಮಾರ್ ಮತ್ತುಉಷಾ ರಾಣಿಯ ಪುತ್ರಿ ಲಕ್ಷ್ಮಿ ಎರಡನೆ ವರ್ಷದ ಫಿಸಿಯೋಥೆರಪಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಳು. ಫೆಬ್ರವರಿ ಒಂದರಂದು ಕಾಲೇಜಿನ ವಿದ್ಯಾರ್ಥಿ ಆದರ್ಶ್ ಲಕ್ಷ್ಮೀಯೊಡನೆ ಪ್ರೇಮ ನಿವೇದನೆ ಮಾಡಿ ವಿಫಲನಾದ ಕೋಪದಿಂದ ಲಕ್ಷ್ಮೀಯ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದ. ಲಕ್ಷ್ಮೀ ಕೊಲೆಯಾದ ಕೋಣೆ ಈಗಲೂ ಮುಚ್ಚಿದ ಸ್ಥಿತಿಯಲ್ಲೇ ಇದೆ.