×
Ad

ತನ್ನ ಮೇಲೆ ಹಲ್ಲೆ ಮಾಡಿದ ಕಪಿಲ್ ಶರ್ಮಗೆ ಸೂಕ್ತ ಚುಚ್ಚು ಮದ್ದು ನೀಡಿದ ‘ಡಾ. ಮಶೂರ್ ಗುಲಾಟಿ’ !

Update: 2017-03-21 11:10 IST

ಹೊಸದಿಲ್ಲಿ, ಮಾ.21: ಆಸ್ಟ್ರೇಲಿಯಾದಿಂದ ಹಿಂದಿರುಗುತ್ತಿದ್ದ ವಿಮಾನವೊಂದರಲ್ಲಿ ತನ್ನನ್ನು ನಿಂದಿಸಿ ಹಲ್ಲೆಗೈದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮ ಅವರಿಗೆ ಅವರ ಶೋದ ಪ್ರಮುಖ ಆಕರ್ಷಣೆಯಾಗಿರುವ ಡಾ.ಮಶೂರ್ ಗುಲಾಟಿ- ಸುನಿಲ್ ಗ್ರೋವರ್ ಸಾಮಾಜಿಕ ಜಾಲತಾಣವೊಂದರಲ್ಲಿ ಮಾಡಿದ ಪೋಸ್ಟ್ ಒಂದರ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

‘‘ನೀವು ನನ್ನನ್ನು ತುಂಬಾ ನೋಯಿಸಿದ್ದೀರಿ. ನಿಮ್ಮೊಂದಿಗೆ ಕೆಲಸ ಮಾಡಿ ನನಗೆ ಬಹಳಷ್ಟು ಅನುಭವ ದೊರೆತಿದೆ. ಪ್ರಾಣಿಗಳ ಹೊರತಾಗಿ ನೀವು ಮನುಷ್ಯರನ್ನೂ ಗೌರವಿಸಿ ಎಂಬುದು ನನ್ನ ಒಂದು ಸಲಹೆ. ನಿಮ್ಮಂತೆಯೇ ಎಲ್ಲರೂ ಯಶಸ್ವಿಯಾಗಿಲ್ಲ. ಎಲ್ಲರೂ ನಿಮ್ಮಷ್ಟು ಪ್ರತಿಭಾವಂತರೂ ಅಲ್ಲ. ಅವರೆಲ್ಲರೂ ನಿಮ್ಮಷ್ಟೇ ಪ್ರತಿಭಾವಂತರಾಗಿದ್ದರೆ ನಿಮಗೆ ಯಾರು ಬೆಲೆ ನೀಡುತ್ತಾರೆ, ನಿಮ್ಮ ಅಸ್ತಿತ್ವಕ್ಕೆ ಸ್ವಲ್ಪ ಕೃತಜ್ಞತೆಯಿರಲಿ. ಯಾರಾದರೂ ನಿಮ್ಮನ್ನು ತಿದ್ದಿದರೆ ಅವರನ್ನು ನಿಂದಿಸಬೇಡಿ. ನಿಮ್ಮ ಜತೆಗಿರುವ ಸ್ಟಾರ್ಡಂಗೆ ಯಾವುದೇ ಸಂಬಂಧವಿಲ್ಲದ ಮಹಿಳೆಯರೆದರು ಕೆಟ್ಟ ಭಾಷೆ ಉಪಯೋಗಿಸಬೇಡಿ. ಅದು ನಿಮ್ಮ ಶೋ ಹಾಗೂ ಯಾರನ್ನಾದರೂ ಯಾವುದೇ ಸಮಯದಲ್ಲಾದರೂ ಹೊರಕ್ಕೆ ಕಳುಹಿಸಲು ನಿಮಗೆ ಅಧಿಕಾರವಿದೆಯೆಂಬುನ್ನು ನನಗೆ ಮನವರಿಕೆ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಕ್ಷೇತ್ರದಲ್ಲಿ ನೀವು ಅತ್ಯುತ್ತಮರು. ಆದರೆ ದೇವರಂತೆ ವರ್ತಿಸಬೇಡಿ. ನಿಮಗೆ ಇನ್ನೂ ಹೆಚ್ಚಿನ ಯಶಸು ಮತ್ತು ಪ್ರಸಿದ್ಧಿ ದೊರೆಯಲಿ,’’ ಎಂದು ಗ್ರೋವರ್ ನೋವಿನಿಂದ ಬರೆದಿದ್ದಾರೆ.

ಮೆಲ್ಬೋರ್ನ್ ನಿಂದ ಹಿಂದಿರುಗತ್ತಿದ್ದ ವಿಮಾನದಲ್ಲಿ ಕಪಿಲ್ ಮತ್ತು ಸುನಿಲ್ ನಡುವೆ ಜಗಳವೇರ್ಪಟ್ಟ ನಂತರ ಮದ್ಯದ ಅಮಲಿನಲ್ಲಿ ಕಪಿಲ್ ಸುನಿಲ್ ಮೇಲೆ ಹಲ್ಲೆಗೈದಿದ್ದರೆನ್ನಲಾಗಿದ್ದು ‘‘ತೇರಿ ಔಕಾತ್ ಕ್ಯಾ ಹೈ ಜೊ ತು ಮುಜ್ಕೋ ಐಸಾ ಬೋಲೆ ?’’ ಎಂದೂ ಪ್ರಶ್ನಿಸಿದ್ದರೆನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News