×
Ad

ಟಿಪ್ಪರ್ - ಕಾರು ಢಿಕ್ಕಿ: ಇಬ್ಬರು ಪುಟಾಣಿಗಳ ಸಾವು

Update: 2017-03-21 11:32 IST

ಕ್ಯಾಲಿಕಟ್, ಮಾ. 21: ಟಿಪ್ಪರ್ ಲಾರಿ ಮತ್ತು ಕಾರು ಢಿಕ್ಕಿಯಾಗಿ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟಿದ್ದಾರೆ. ವಡಗರ ತಾಯಯಂಙಡಿ ಎಂಬಲ್ಲಿನ ಆದಿಲ್(5), ನಹ್ರಿನ್(7) ಮೃತಪಟ್ಟ ಮಕ್ಕಳಾಗಿದ್ದಾರೆ.

ಕ್ಯಾಲಿಕಟ್ ತಿಕ್ಕೊಡಿ ಪಾಲೂರಿನಲ್ಲಿ ಅಪಘಾತ ಸಂಭವಿಸಿದ್ದು, ಮುಕ್ಕಂ ಕ್ರಷರ್‌ನಿಂದ ಬರುತ್ತಿದ್ದ ಟಿಪ್ಪರ್ ಲಾರಿ ಕೊಯಿಲಾಂಡಿ ಕೊಲ್ಲಂ ಕಡೆಗೆ ಹೋಗುತ್ತಿದ್ದ ಕಾರಿಗೆ ಢಿಕ್ಕಿಹೊಡೆದು ಅದರಮೇಲೆ ಮಗುಚಿ ಬಿದ್ದಿದೆ.

ಅಪಘಾತ ನಡೆದ ಕೂಡಲೆ ಕಾರಿನಲ್ಲಿದ್ದವರನ್ನು ಕೊಯಿಲಾಂಡಿ ಆಸ್ಪತ್ರೆ ಹಾಗೂ ಕ್ಯಾಲಿಕಟ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಇವರಲ್ಲಿ ಇಬ್ಬರು ಮಕ್ಕಳು ಮೃತಪಟ್ಟರು. ಕಾರಿನಲ್ಲಿದ್ದ ಇವರ ತಾಯಿ ಮತ್ತು ಸಹೋದರ ಗಾಯಗೊಂಡಿದ್ದಾರೆ. ಮೃತರಾದ ಮಕ್ಕಳು ಕೊಯಿಲಾಂಡಿ ಮಾರ್ಕ್ಸ್ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News