×
Ad

ನಗದು ವಹಿವಾಟು ಮಿತಿ 2 ಲ.ರೂ.ಗೆ ಇಳಿಸಲು ಸರಕಾರದ ಪ್ರಸ್ತಾವ

Update: 2017-03-21 21:48 IST

 ಹೊಸದಿಲ್ಲಿ,ಮಾ.21: ಅಭೂತಪೂರ್ವ ಕ್ರಮವೊಂದರಲ್ಲಿ ಮಂಗಳವಾರ ಹಣಕಾಸು ಮಸೂದೆಗೆ 40 ತಿದ್ದುಪಡಿಗಳನ್ನು ಮಂಡಿಸಿದ ಸರಕಾರವು ಬಜೆಟ್‌ನಲ್ಲಿ ಪ್ರಕಟಿಸ ಲಾಗಿರುವ ನಗದು ವಹಿವಾಟುಗಳ ಮೇಲಿನ ಮೂರು ಲಕ್ಷ ರೂ.ಗಳ ಮಿತಿಯನ್ನು ಎರಡು ಲ.ರೂ.ಗಳಿಗೆ ತಗ್ಗಿಸುವ ಪ್ರಸ್ತಾವವನ್ನು ಮುಂದಿರಿಸಿದೆ.

ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಪರಿಗಣನೆಗಾಗಿ ಕೈಗೆತ್ತಿಕೊಂಡಿದ್ದು, ಈ ಪೈಕಿ ಹಲವಾರು ತಿದ್ದುಪಡಿಗಳ ವಿರುದ್ಧ ಪ್ರತಿಭಟಿಸಿದ ಟಿಎಂಸಿ,ಬಿಜೆಡಿ ಮತ್ತು ಆರ್‌ಎಸ್‌ಪಿ ಸೇರಿದಂತೆ ಪ್ರತಿಪಕ್ಷಗಳು, ಇವುಗಳನ್ನು ಹಿಂಬಾಗಿಲ ಮೂಲಕ ತರಲಾಗುತ್ತಿದೆ ಎಂದು ಟೀಕಿಸಿದವು.

ಪ್ರತಿಪಕ್ಷಗಳ ಆಕ್ಷೇಪಗಳನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತಳ್ಳಿಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News