×
Ad

ಉ.ಪ್ರದೇಶ ಸಿಎಂನಿಂದ ಅಧಿಕಾರಿಗಳಿಗೆ ಮಹತ್ವದ ಆದೇಶ

Update: 2017-03-22 18:59 IST

ಲಕ್ನೋ,ಮಾ.22: ಬುಧವಾರ ಇಲ್ಲಿಯ ಸಚಿವಾಲಯ ಕಟ್ಟಡಕ್ಕೆ ತನ್ನ ಮೊದಲ ಭೇಟಿ ಸಂದರ್ಭ ಬೀಡಾದ ಉಗುಳಿನಿಂದ ಕೂಡಿದ್ದ ಗೋಡೆಗಳನ್ನು ನೋಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು, ಕಚೇರಿ ಕರ್ತವ್ಯದಲ್ಲಿರುವಾಗ ಪಾನ್,ಪಾನ್ ಮಸಾಲಾ ಇತ್ಯಾದಿಗಳನ್ನು ತಿನ್ನುವುದನ್ನು ನಿಲ್ಲಿಸುವಂತೆ ಸರಕಾರಿ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.

ಮುಖ್ಯಮಂತ್ರಿಗಳು ಕಟ್ಟಡದ ಎಲ್ಲ ಅಂತಸ್ತುಗಳಿಗೂ ಭೇಟಿ ನೀಡಿ ಅಧಿಕಾರಿ ಗಳೊಂದಿಗೆ ಮಾತನಾಡಿದರು. ಪಾನ್ ಕಲೆಗಳಿಂದ ಕೂಡಿದ್ದ ಗೋಡೆಗಳನ್ನು ನೋಡಿದ ಅವರು ಕರ್ತ್ಯವ್ಯದ ಸಮಯದಲ್ಲಿ ಪಾನ್ ತಿನ್ನದಂತೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ನಿವಾರಿಸುವಂತೆಯೂ ಅವರು ತಿಳಿಸಿದರು ಎಂದು ಆದಿತ್ಯನಾಥರ ಜೊತೆಯಲ್ಲಿದ್ದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ವೌರ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

ಲಾಲ್ ಬಹದೂರ ಶಾಸ್ತ್ರಿ ಭವನ ಎಂದು ಕರೆಯಲಾಗುವ ಸಚಿವಾಲಯ ಕಟ್ಟಡವು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ(ಗೃಹ) ಮತ್ತು ಇತರ ಹಿರಿಯ ಐಎಎಸ್ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News