ನಿಮ್ಮ ಗಲೀಜು ತೆಗೆಯುವ ನಾವೇ ನಿಮಗೆ ಗಲೀಜು !: ಗಲೀಜು ತೆಗೆಯುವವನ ಮಗಳು

Update: 2017-03-23 07:47 GMT

ನೀವೇಕೆ ನನ್ನ ಫೋಟೋ ತೆಗೆಯ ಬಯಸುತ್ತೀರಿ ? ಯಾರೂ ನನ್ನನ್ನು ಇಷ್ಟ ಪಡುವುದಿಲ್ಲ. ಎಲ್ಲರಿಗೂ ನಾನೊಬ್ಬಳು ಜಾಡಮಾಲಿಯ ಮಗಳು. ಚಿಕ್ಕವಳಿದ್ದಾಗ ನಮ್ಮ ಮನೆ ಹತ್ತಿರದ ಗದ್ದೆಗೆ ನಾನು ಹೋಗುತ್ತಿದ್ದೆ, ಅಲ್ಲಿ ನನ್ನ ವಯಸ್ಸಿನ ಹುಡುಗಿಯರೊಂದಿಗೆ ಆಟವಾಡಬೇಕೆಂಬ ಬಯಕೆ ನನ್ನದಾಗಿತ್ತು. ಆದರೆ ಅವರ ಹೆತ್ತವರು ಅವರನ್ನು ನನ್ನೊಂದಿಗೆ ಆಟವಾಡಲು ಬಿಡುತ್ತಲೇ ಇರಲಿಲ್ಲ.

ಒಂದು ದಿನ ಅವರಲ್ಲೊಬ್ಬ ಹುಡುಗಿಯ ಬಳಿ ಅವರೇಕೆ ನನ್ನನ್ನೂ ಅವರ ಜತೆ ಆಟದಲ್ಲಿ ಸೇರಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದೆ. ‘‘ನೀನು ಜಾಡಮಾಲಿಯ ಮಗಳೆಂದು ನಿನಗೆ ಗೊತ್ತಿಲ್ಲವೇನು ?"’ ಎಂದು ಆಕೆ ಹೇಳಿದಳು. ಅಂದಿನಿಂದ ನಾನು ಆ ಗದ್ದೆಯ ಪಕ್ಕ ಹೋಗಲೇ ಇಲ್ಲ. ನಮ್ಮ ಜನರು ಏನು ಮಾಡುತ್ತಾರೆಂದು ನಿಮಗೆ ಗೊತ್ತೇನು ? ನಿಮ್ಮ ಗಲೀಜನ್ನು ನಾವು ತೆಗೆಯುತ್ತೇವೆ. ನಾವು ನಿಮ್ಮನ್ನು ಶುದ್ಧಗೊಳಿಸುತ್ತೇವೆ ಆದರೆ ನಿಮ್ಮ ಎರಡು ನಿಮಿಷಗಳ ಗಮನಕ್ಕೂ ಅರ್ಹರಲ್ಲದಷ್ಟು ನಾವು ನಿಮಗೆಲ್ಲರಿಗೂ ಅತ್ಯಂತ ಗಲೀಜು ಜನರಾಗಿ ಬಿಟ್ಟಿದ್ದೇವೆ. ನೀವು ನಿಮ್ಮ ಸಮಯ ಹಾಳು ಮಾಡುತ್ತಿದ್ದೀರೆಂದು ನನಗೆ ಖಂಡಿತ ತಿಳಿದಿದೆ. ಯಾರಿಗೂ ಈ ಚಿತ್ರ ಇಷ್ಟವಾಗಲಿಕ್ಕಿಲ್ಲ. ಕಸದ ರಾಶಿಯ ಬಳಿ ನಿಂತು ಯಾರಿಗೂ ಜಾಡಮಾಲಿ ಅಥವಾ ಆತನ ಮಗಳನ್ನು ಹೊಗಳಲು ಸಮಯವಿರಲಿಕ್ಕಿಲ್ಲ.

-ಜಾಡಮಾಲಿಯ ಮಗಳು ( ಆ ಹೆಸರನ್ನೇ ಉಪಯೋಗಿಸಬೇಕೆಂದು ಆಕೆಯ ಇಚ್ಛೆಯಾಗಿತ್ತು)

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News