×
Ad

26,684 ಕೋ. ರೂ. ಮೌಲ್ಯದ ಬೀಫ್ ರಫ್ತು ಮಾಡಿದ ಭಾರತ

Update: 2017-03-27 20:50 IST

ಹೊಸದಿಲ್ಲಿ, ಮಾ.27: ಕಳೆದ (2015-16)ರ ಆರ್ಥಿಕ ವರ್ಷದಲ್ಲಿ ಭಾರತ 26,684 ಕೋಟಿ ರೂ. ಮೊತ್ತದ ಕೋಣದ ಮಾಂಸವನ್ನು ರಫ್ತು ಮಾಡಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

  ವಿಯೆಟ್ನಾಮ್, ಮಲೇಶ್ಯಾ, ಈಜಿಪ್ಟ್, ಇಂಡೋನೇಶಿಯಾ ಮತ್ತು ಸೌದಿ ಅರೆಬಿಯಾ ದೇಶಗಳಿಗೆ ಭಾರತ ಮಾಂಸ ರಪ್ತು ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

  ಹಾಲಿ ಇರುವ ರಫ್ತು ನೀತಿಯ ಪ್ರಕಾರ ದನದ ಮಾಂಸವನ್ನು ರಫ್ತು ಮಾಡುವುದಕ್ಕೆ ನಿಷೇಧವಿದೆ. ಕೋಣದ ಮೂಳೆರಹಿತ ಮಾಂಸ, ಆಡು, ಕುರಿ ಮತ್ತು ಪಕ್ಷಿಗಳ ಮಾಂಸ ರಪ್ತು ಮಾಡಲು ಅವಕಾಶವಿದೆ. ಈ ವರ್ಷದ ಜನವರಿಯಿಂದ ಎಪ್ರಿಲ್ ವರೆಗಿನ ಅವಧಿಯಲ್ಲಿ 2.82 ಕೋಟಿ ರೂ. ಸಂಸ್ಕರಿಸಿದ ಮಾಂಸ ರಫ್ತು ಮಾಡಲಾಗಿದೆ. ಇದೇ ಅವಧಿಯಲ್ಲಿ 727.16 ಕೋಟಿ ರೂ. ಮೌಲ್ಯದ ಆಡು/ಕುರಿ/ ಮಾಂಸ ಮತ್ತು 22,073.5 ಕೋಟಿ ರೂ. ಮೌಲ್ಯದ ಹಕ್ಕಿಗಳ ಮಾಂಸವನ್ನು ರಫ್ತು ಮಾಡಲಾಗಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News