ಇರಾನ್‌ನಿಂದ ಬಿಡುಗಡೆಗೊಂಡ ಭಾರತದ ಮೀನುಗಾರರು ಇಂದು ಊರಿಗೆ
Update: 2017-04-06 15:25 IST
ಮನಾಮ, ಎ. 6: ಇರಾನ್‌ನಿಂದ ಬಿಡುಗಡೆಗೊಂಡು ಮರಳಿದ 15 ಮೀನುಗಾರರು ಇಂದು ಊರಿಗೆ ಮರಳುತ್ತಿದ್ದಾರೆ. ಇವರಿಗೆ ಊರಿಗೆ ಬರುವ ಪ್ರಯಾನದ ವೆಚ್ಚವನ್ನು ಭಾರತದ ದೂತವಾಸ ಭರಿಸಿದೆ. ಎಮಿರೇಟ್ಸ್ ವಿಮಾನದಲ್ಲಿ ಚೆನ್ನೈಗೆ ಇವರು ಆಗಮಿಸುತ್ತಿದ್ದಾರೆ.
ದೂತವಾಸದ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಕರು ಇವರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ಬಹ್ರೈನ್‌ನ ವಿದೇಶಿಯರ ಹೋಪ್ಪಿ ಕಾರ್ಯಕರ್ತರೂ ಕಿಟ್ ಇತ್ಯಾದಿ ನೀಡಿದ್ದಾರೆ.
ಮೀನು ಹಿಡಿಯುವಾಗ ಸಮುದ್ರ ಗಡಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಇವರನ್ನು ಇರಾನ್ ಅಧಿಕಾರಿಗಳು ಬಂಧಿಸಿದ್ದರು. ನಂತರ ಕಿಶ್ ದ್ವೀಪದಲ್ಲಿ ಇವರನ್ನು ತಡೆದಿರಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು. ಬಹ್ರೈನ್‌ನ ಎರಡು ಸ್ಪೋನ್ಸರ್‌ಗಳ ಅಧೀನದಲ್ಲಿ ಇವರು ಮೀನುಗಾರಿಕೆ ಉದ್ಯೋಗ ಮಾಡುತ್ತಿದ್ದರು. ಎಲ್ಲರೂ ತಮಿಳ್ನಾಡಿನವರು.