ಈ 8 ತಿಂಗಳ ಮಗುವಿನ ದೇಹತೂಕ ಬರೋಬರಿ 17 ಕೆಜಿ!

Update: 2017-04-15 08:23 GMT

ಹೊಸದಿಲ್ಲಿ, ಎ.15: ಪಂಜಾಬ್ ರಾಜ್ಯದಲ್ಲಿನ ಎಂಟು ತಿಂಗಳು ಪ್ರಾಯದ ಹೆಣ್ಣು ಮಗು ಚಾಹತ್ ಕುಮಾರ್ ದೇಹ ತೂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಎಲ್ಲರಿಗೂ ಅಚ್ಚರಿಯುಂಟು ಮಾಡುತ್ತಿದ್ದಾಳೆ. ಈಗ ಅವಳ ದೇಹ ತೂಕ 17 ಕೆ.ಜಿ.ಯಷ್ಟಾಗಿದೆ.
ಚಾಹತ್ ಳ ತಾಯಿ ರೀನಾ ಕುಮಾರ್ ಪ್ರಕಾರ ಮಗು ಹುಟ್ಟಿದಾಗ ಆಕೆಯ ತೂಕ ಸಾಮಾನ್ಯ ಶಿಶುಗಳಂತೆಯೇ ಇದ್ದರೆ, ಮುಂದಿನ ಕೆಲ ತಿಂಗಳುಗಳಲ್ಲಿ ಆಕೆಯ ತೂಕ ಹೆಚ್ಚಾಗುತ್ತಾ ಹೋಗಲು ಆರಂಭಿಸಿತ್ತು.

‘‘ನಾವು ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆಕೆಯ ರಕ್ತದ ಮಾದರಿಯನ್ನು ಪರೀಕ್ಷಿಸಬೇಕೆಂದು ಹೇಳಿದರು. ಆದರೆ ಆಕೆಯ ಚರ್ಮ ಅತಿಯಾಗಿ ದಪ್ಪವಿರುವುದರಿಂದ ರಕ್ತ ಮಾದರಿ ಸಂಗ್ರಹಿಸುವುದೂ ಕಷ್ಟವಾಗಿತ್ತು’’ ಎಂದು ಮಗುವಿನ ತಂದೆ ಸೂರಜ್ ಕುಮಾರ್ ಹೇಳುತ್ತಾರೆ.

ಚಾಹತ್ ಹುಟ್ಟಿದಂದಿನಿಂದ ಆಕೆಯ ಆರೋಗ್ಯದ ಮೇಲೆ ನಿಗಾ ಇಟ್ಟಿರುವ ಡಾ ವಾಸುದೇವ್ ಶರ್ಮ ಹೇಳುವಂತೆ ಚಾಹತ್ ದೇಹತೂಕ ನಿಯಂತ್ರಿಸುವುದ ಅಗತ್ಯವಾಗಿದೆ. ಆಕೆ ತಿನ್ನುವುದನ್ನು ಕಡಿಮೆ ಮಾಡಬೇಕಿದೆ. ಚಾಹತ್ 10 ವರ್ಷದ ಮಕ್ಕಳು ತಿನ್ನುವಷ್ಟು ಆಹಾರ ಸೇವಿಸುತ್ತಾಳೆಂದು ವೈದ್ಯರು ಹೇಳಿದ್ದಾರೆ. ಅತಿಯಾದ ದೇಹ ತೂಕದಿಂದ ಚಾಹತ್ ಗೆ ಉಸಿರಾಟ ಹಾಗೂ ನಿದ್ದೆಯ ಸಮಸ್ಯೆ ಕೂಡ ಎದುರಾಗಿದೆಯೆಂದು ವೈದ್ಯರು ಹೇಳುತ್ತಾರೆ.

ವಿಶ್ವದ ಅತ್ಯಂತ ದಢೂತಿ ಮಹಿಳೆ ಈಜಿಪ್ಟ್ ದೇಶದ ಇಮಾನ್ ಅಹಮದ್ ಗೆ ಯಶಸ್ವೀ ಚಿಕಿತ್ಸೆ ನೀಡುತ್ತಿರುವ ಮುಂಬೈ ವೈದ್ಯರು ಈ ಮಗುವಿಗೂ ಚಿಕಿತ್ಸೆ ನೀಡಲಿದ್ದಾರೆಂಬ ಬಗ್ಗೆ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News