ಕರು ಸತ್ತದ್ದಕ್ಕಾಗಿ 7 ವರ್ಷದ ಪುತ್ರಿಯ ಬಾಲ್ಯವಿವಾಹಕ್ಕೆ ತಾಕೀತು ಮಾಡಿದ ಜಾತಿ ಪಂಚಾಯತ್

Update: 2017-04-15 18:44 GMT

ಭೋಪಾಲ್,ಎ.15: ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ದೇಶದ ವಿವಿಧೆಡೆ ವರದಿಯಾಗುತ್ತಿರುವ ನಡುವೆಯೇ ಕರುವನ್ನು ಕೊಂದನೆಂಬ ಕಾರಣಕ್ಕಾಗಿ ಬಂಜಾರ ಸಮದಾಯದ ಗ್ರಾಮಸ್ಥನೊಬ್ಬನ ಏಳು ವರ್ಷದ ಪುತ್ರಿಯ ಬಾಲ್ಯವಿವಾಹಕ್ಕೆ ಜಾತಿ ಪಂಚಾಯತ್ ಬಲವಂತ ಪಡಿಸಿದ ಘಟನೆ ಮಧ್ಯಪ್ರದೇಶದ ವರದಿಯಾಗಿದೆ.

  ಗುನಾ ಜಿಲ್ಲೆಯ ತಾರ್‌ಪುರ್ ಗ್ರಾಮದ ನಿವಾಸಿ ಜಗದೀಶ್ ಬಂಜಾರ ಎಂಬಾತ, ಮೂರು ವರ್ಷಗಳ ಹಿಂದೆ ತನ್ನ ಗದ್ದೆಗೆ ನುಗ್ಗಿದ್ದ ಬೀಡಾಡಿ ದನಗಳನ್ನು ಅಟ್ಟುತ್ತಿದ್ದಾಗ ಆತ ಎಸೆದ ಕಲ್ಲೊಂದು ಕರುವಿಗೆ ಬಡಿದಿತ್ತು. ಇದಾದ ಕೆಲವು ತಾಸುಗಳ ಬಳಿಕ ಕರುವು ಅಸುನೀಗಿತ್ತು. ಘಟನೆಯ ಸಂಬಂಧಿಸಿ ಬಂಜಾರ ಸಮುದಾಯದ ಮುಖಂಡರು ಆತನಿಗೆ ಹಾಗೂ ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದರು.

    ಕರುವನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅಲಹಾಬಾದ್‌ನ ಗಂಗಾನದಿಯಲ್ಲಿ ಸ್ನಾನ ಮಾಡಬೇಕು ಹಾಗೂ ಮಧ್ಯಪ್ರದೇಶದಲ್ಲಿರುವ ಆತನ ಗ್ರಾಮವಾದ ತಾರ್‌ಪುರ್‌ನಲ್ಲಿ ಇಡೀ ಸಮುದಾಯಕ್ಕೆ ಮಾಂಸದೂಟವನ್ನು ಏರ್ಪಡಿಸಬೇಕೆಂದು ಬಂಜಾರ ಜಾತಿ ಪಂಚಾಯತ್ ತಾಕೀತು ಮಾಡಿತ್ತು. ಅವರ ಎಲ್ಲಾ ಶರತ್ತುಗಳನ್ನು ಜಗದೀಶ್ ಈಡೇರಿಸಿದ್ದ,. ಆದಾಗ್ಯೂ ಆತನ ಕುಟುಂಬವನ್ನು ಪಂಚಾಯತ್‌ಕಳೆದ ಮೂರು ವರ್ಷಳಿಂದ ಬಹಿಷ್ಕರಿಸಿತ್ತು. ಶುಕ್ರವಾರ ನಡೆದ ಪಂಚಾಯತ್ ಸಭೆಯಲ್ಲಿ ಕೆಲವು ಜಾತಿ ಮುಖಂಡರು, ಇತರ ಗ್ರಾಮಗಳ ಜನ ತಾರಾಪುರದ ಜನರ ಜೊತೆ ವಿವಾಹ ಸಂಬಂಧ ಬೆಳೆಸದಿರಲು ಜಗದೀಶ್ ಕಾರಣನೆಂದು ಆರೋಪಿಸಿದರು. ಇದಕ್ಕೆ ಶಿಕ್ಷೆಯಾಗಿ ಪಂಚಾಯತ್, ಆತನ ಏಳು ವರ್ಷದ ಮಗಳನ್ನು, ನೆರೆಯ ವಿದಿಷಾ ಜಿಲ್ಲೆಯ ಎಂಟು ವರ್ಷದ ಬಾಲಕನ ಜತೆ ಮದುವೆ ಮಾಡುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News