ಕೇಂದ್ರೀಯ ವಿದ್ಯಾಲಯಗಳಲ್ಲಿ 10ನೆ ತರಗತಿ ತನಕ ಹಿಂದಿ ಕಡ್ಡಾಯ

Update: 2017-04-18 08:13 GMT

ಹೊಸದಿಲ್ಲಿ, ಎ.18: ಕೇಂದ್ರೀಯ ವಿದ್ಯಾಲಯ ಮತ್ತು ಸಿಬಿಎಸ್‌ಸಿ ಸಂಯೋಜಿತ ಶಾಲೆಗಳಲ್ಲಿ ಇನ್ನು ಮಂದಿ 10ನೆ ತರಗತಿ ತನಕ ಹಿಂದಿ ಭಾಷಾ ಶಿಕ್ಷಣ ಕಡ್ಡಾಯವಾಗಿದೆ 
ಕೇಂದ್ರ ಸರಕಾರದ ಸಂಸದೀಯ ಸಮಿತಿಯು ನೀಡಿದ ಶಿಫಾರಸಿನಂತೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು  ಕೇಂದ್ರೀಯ ಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಅಂಕಿತ ಹಾಕಿದ್ದಾರೆ.
ಸಂಸದೀಯ ಸಮಿತಿಯು ಹಿಂದಿ ಅಧಿಕೃತ ಭಾಷೆಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ 117 ಶಿಫಾರಸುಗಳನ್ನು ಮಾಡಿದ್ದು, ಬಹುತೇಕ ಶಿಫಾರಸುಗಳನ್ನು ಅಂಗೀಕರಿಸಿದ್ದಾರೆ. ಆದರೆ ಸರಕಾರಿ ನೌಕರಿ ಪಡೆಯಲು ಅಭ್ಯರ್ಥಿಯು ಕನಿಷ್ಠ ಭಾಷಾಜ್ಞಾನ ಹೊಂದಿರಬೇಕೆಂಬ ಸಲಹೆಯನ್ನು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News