ಭೂಮಿಯ ಸಮೀಪದಿಂದ ಹಾದು ಹೋದ ಬಾಹ್ಯಾಕಾಶ ಬಂಡೆ

Update: 2017-04-20 15:23 GMT

ವಾಶಿಂಗ್ಟನ್, ಎ. 20: ಸುಮಾರು 1.3 ಕಿಲೋಮೀಟರ್ ಗಾತ್ರದ ಕ್ಷುದ್ರ ಗ್ರಹವೊಂದು ಬುಧವಾರ ಭೂಮಿಯ ಸಮೀಪದಲ್ಲಿ ಹಾದು ಹೋಯಿತು. ಈ ಮೂಲಕ ಬಾಹ್ಯಾಕಾಶದ ಬೃಹತ್ ಬಂಡೆಯೊಂದನ್ನು ಹತ್ತಿರದಿಂದ ಪರಿಶೀಲಿಸುವ ಅವಕಾಶ ಖಗೋಳ ವಿಜ್ಞಾನಿಗಳಿಗೆ ಲಭಿಸಿತು.

2014-ಜೆಒ25 ಎಂಬ ಹೆಸರಿನ ಕ್ಷುದ್ರಗ್ರಹ ಭಾರತೀಯ ಕಾಲಮಾನ ಬುಧವಾರ ಸಂಜೆ 5:50ಕ್ಕೆ ಭೂಮಿಯ ಅತ್ಯಂತ ಸಮೀಪಕ್ಕೆ ಆಗಮಿಸಿತು. ಈಗ ಅದು ನಮ್ಮ ಸೌರವ್ಯೆಹದ ಕೇಂದ್ರದಿಂದ ದೂರಕ್ಕೆ ಧಾವಿಸುತ್ತಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿ ಇಯಾನ್ ಕ್ಯಾರ್ನೆಲಿ ತಿಳಿಸಿದರು.

‘‘ಅದು ನಮ್ಮ ಗ್ರಹಕ್ಕೆ ಅಪಾಯ ಉಂಟು ಮಾಡುವುದಿಲ್ಲ’’ ಎಂದು ಕ್ಯಾರ್ನೆಲಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.ಆಕಾಶ ಬಂಡೆಯು ಭೂಮಿಯಿಂದ 18 ಲಕ್ಷ ಕಿಲೋಮೀಟರ್ ಅಂತರದಲ್ಲಿ ಹಾದು ಹೋಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News