ಅಣ್ಣಾ ಡಿಎಂಕೆ ವಿಲೀನ ವಿಫಲ: ಅನಿಶ್ಚಿತತೆಯೆಡೆಗೆ ಪಕ್ಷಗಳು !

Update: 2017-04-21 05:47 GMT

ಚೆನ್ನೈ,ಎ. 21: ಅಣ್ಣಾಡಿಎಂಕೆ ಅಮ್ಮಾ ಪಕ್ಷ ಮತ್ತು ಪುರುಚ್ಚಿ ತಲೈವಿ ಅಮ್ಮಾ ವಿಭಾಗವೂ ಪರಸ್ಪರ ವಿಲೀನಗೊಳ್ಳುವ ಚರ್ಚೆ ವಿಫಲವಾಗಿದೆ. ಶರ್ತಗಳನ್ನು ಮುಂದಿಟ್ಟದ್ದರಿಂದ ಚರ್ಚೆ ವಿಫಲವಾಗಲು ಕಾರಣವಾಗಿದ್ದರೂ ಅನಧಿಕೃತ ಚರ್ಚೆ ಮುಂದುವರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆಪಕ್ಷದ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಸ್ಥಾನಗಳ ಕುರಿತು ಒಮ್ಮತ ಎರಡು ಬಣಗಳಲ್ಲಿ ಮೂಡಿಲ್ಲ.

ಶಶಿಕಲಾರನ್ನುಮತ್ತುಕುಟುಂಬವನ್ನು ಪಕ್ಷದಿಂದ ಹೊರಹಾಕುವ ಅಧಿಕೃತ ಕ್ರಮಗಳು ಕೂಡಾ ತಡಗೊಳ್ಳುತ್ತಿದೆ. ಆದ್ದರಿಂದ ಉಭಯ ವಿಭಾಗಗಳಲ್ಲಿ ನಿಗದಿಯಾಗಿದ್ದ ಅಧಿಕೃತ ಸಮಾಲೋಚನೆ ಅನಿಶ್ಚಿತವಾಗಿ ಮುಂದುವರಿಯುತ್ತಿದೆ.

ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ನೇತೃತ್ವದ ಪುರಚ್ಚಿ ತಲೈವಿ ಅಮ್ಮಾ ವಿಭಾಗ ಶರ್ತಗಳನ್ನು ಬಹಿರಂಗಪಡಿಸಿವೆ. ಜಯಲಲಿತಾರ ಸಾವಿನ ಕುರಿತು ಸಿಬಿಐ ತನಿಖೆ, ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ವಿ.ಕೆ. ಶಶಿಕಲಾ, ಡೆಪ್ಯುಟಿ ಕಾರ್ಯದರ್ಶಿ ಸ್ಥಾನಕ್ಕೆ ಟಿ.ಟಿ.ವಿ. ದಿನಕರ್‌ನ ರಾಜೀನಾಮೆ ನೀಡಿರುವ ಅಫಿದಾವಿತ್‌ನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಬೇಕು. ಶಶಿಕಲಾರ ಕುಟುಂಬದ ಇಪ್ಪತ್ತರಷ್ಟು ಮಂದಿಯನ್ನು ಪಕ್ಷದಿಂದ ಹೊರಹಾಕಬೇಕು. ಇದು ಪನೀರ್ ಸೆಲ್ವಂ ನೇತೃತ್ವದ ಪುರುಚ್ಚಿ ತಲೈವಿ ಅಮ್ಮಾ ವಿಭಾಗದ ಶರ್ತವಾಗಿದೆ.

 ಪನೀರ್ ಸೆಲ್ವಂ ಮುಖ್ಯಮಂತ್ರಿಸ್ಥಾನವನ್ನು ಕೇಳಿಲ್ಲ ಎಂದು ಮಾಜಿ ಸಚಿವ ಕೆ.ಪಿ. ಮುನಿಸ್ವಾಮಿ ಹೇಳಿದರು. ಶಶಿಕಲಾ ನೇಮಿಸಿದ ವ್ಯಕ್ತಿ ಎನ್ನುವ ಕಾರಣದಿಂದ ಎಡಪ್ಪಾಡಿ ಕೆ. ಪಳನಿಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ದೂರನಿಲ್ಲಬೇಕೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜಯ ಲಲಿತಾ ಮೂರು ಸಲ ಮುಖ್ಯಮಂತ್ರಿಯಾಗಿ ಪನೀರ್ ಸೆಲ್ವಂರನ್ನು ಮಾಡಿದ್ದಾರೆ. ತನ್ನ ಉತ್ತರಾಧಿಕಾರಿಯಾಗಿ ಪನೀರ್ ಸೆಲ್ವಂರನ್ನು ನಿಶ್ಚಯಿಸಿದ್ದರ ಸಂದೇಶ ಇದು ಎಂದು ಮುನಿಸ್ವಾಮಿ ಹೇಳಿದ್ದಾರೆ.ಇದೇವೇಳೆ ಟಿ ಟಿ ದಿನಕರನ್ ತನ್ನ ಜೊತೆಗೆ ಇರುವ ಮೂವತ್ತು ಶಾಸಕರುಗಳನ್ನು ಬಹಿರಂಗವಾಗಿ ರಂಗಕ್ಕಿಳಿಸಲು ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ. ಅಣ್ಣಾ ಡಿಎಂಕೆಯ ಎರಡು ವಿಭಾಗಗಳೂ ತಮಿಳ್ನಾಡಿಗೇ ನಾಚಿಕೆಗೇಡು ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ತಂಬಿದೊರೈ:

ತಮಿಳ್ನಾಡಿನ ಹೆಚ್ಚುವರಿ ಹೊಣೆಗಾರಿಕೆಯಿರುವ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್‌ರನ್ನು ಲೋಕಸಭಾ ಡೆಪ್ಯುಟಿ ಸ್ಪೀಕರ್ ಎಂ.ತಂಬಿದೊರೈ ಮತ್ತು ತಮಿಳ್ನಾಡಿನ ವಿತ್ತಸಚಿವ ವಿಜಯಕುಮಾರ್ ಸಂದರ್ಶಿಸಿದ್ದಾರೆ. ರಾಜಕೀಯ ಉದ್ದೇಶದ ಭೇಟಿ ಇದಲ್ಲ. ಬದಲಾಗಿ ವೈಯಕ್ತಿಕ ಭೇಟಿ ಇದೆಂದು ತಂಬಿದೊರೈ ಹೇಳಿದ್ದಾರೆ. ತಮಿಳ್ನಾಡಿನಲ್ಲಿ ಆಡಳಿತಾತ್ಮಕ ಬಿಕ್ಕಟ್ಟಿಲ್ಲ. ಎರಡು ವಿಭಾಗಗಳನ್ನು ಒಂದುಗೂಡಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News