ರಾಹುಲ್ ನಾಯಕತ್ವವನ್ನು ಟೀಕಿಸಿದ, ದಿಲ್ಲಿ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆಯ ಉಚ್ಚಾಟನೆ !

Update: 2017-04-21 07:12 GMT

ಹೊಸದಿಲ್ಲಿ, ಎ. 21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನುಟೀಕಿಸಿದ ದಿಲ್ಲಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬರ್ಕಾಶುಕ್ಲಾ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷ ಆರು ವರ್ಷಗಳ ಅವಧಿಗೆ ಉಚ್ಚಾಟಿಸಿದೆ. ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಈ ನಿರ್ಧಾರ ತಳೆದಿದೆ. ಪಕ್ಷ ಮುಖಂಡ ಅಜಯ್ ಮಾಕನ್

ತನ್ನೊಡನೆಕೆಟ್ಟದಾಗಿವರ್ತಿಸಿದ್ದಾರೆ ಎಂದು ಬರ್ಕಾ ಸಿಂಗ್ ಆರೋಪಿಸಿದ್ದರು. ಮಾತ್ರವಲ್ಲ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಬರ್ಕಾಸಿಂಗ್ ಟೀಕಿಸಿದ್ದರು. ತನ್ನನ್ನು ಅವರು ಪಕ್ಷದ ಪ್ರಾಮಾಣಿಕ ಸೈನಿಕಳು ಎಂದು ಬಣ್ಣಿಸಿಕೊಂಡಿದ್ದರು. ಪಕ್ಷತೊರೆಯುವುದಿಲ್ಲ ಎಂದಿದ್ದರು. ಆದರೆ ದಿಲ್ಲಿ ಕಾಂಗ್ರೆಸ್ ಮುಖ್ಯ ವಕ್ತಾರೆ ಶರ್ಮಿಷ್ಠಾಮುಖರ್ಜಿ ಬರ್ಕಾ ಅವರು ವೈಯಕ್ತಿಕ ವಿಚಾರಗಳನ್ನು ಮುಂದೆ ತಂದು ಪಕ್ಷದ ಹಿತಕ್ಕೆ ಹಾನಿಯೆಸಗುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ದಿಲ್ಲಿ ಸ್ಥಳೀಯಾಡಳಿತ ಚುನಾವಣೆಯು ತಲೆ ಮೇಲಿದೆ. ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪ ಹೊರಿಸಿದ್ದರು.

"ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ ಪಕ್ಷವನ್ನುಮುನ್ನಡೆಸಲು ಸೂಕ್ತ ಅಲ್ಲ ಎಂದು  ಹೇಳುತ್ತಿದ್ದಾರೆ. ಅವರ ಹೆಸರನ್ನು ನಾನು ಬಹಿರಂಗ ಪಡಿಸಲಾರೆ. ಆದರೆ ಈ ನಾಯಕರು ಅವರ ವಿಚಾರವನ್ನು ಪ್ರಕಟಿಸಲು ಯಾಕೆ ಮುಂದೆ ಬರುವುದಿಲ್ಲ" ಎಂದು ಬರ್ಕಾ ಸಿಂಗ್ ಇನ್ನೊಂದು ಹೇಳಿಕೆಯನ್ನೂ ನೀಡಿದ್ರು.

 ಇತ್ತೀಚೆಗೆ ದಿಲ್ಲಿ ಕಾಂಗ್ರೆಸ್‌ನ ಹಲವಾರು ಪ್ರಮುಖ ನಾಯಕರು ಬೇರೆ ಪಕ್ಷಗಳತ್ತಮುಖಮಾಡುತ್ತಿದ್ದಾರೆ. . ಇತ್ತೀಚೆಗೆ ದಿಲ್ಲಿಯ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಕೂಡಾ ಕಾಂಗ್ರೆಸ್ ಪಕ್ಷ ತೊರೆಯುವ ವೇಳೆ ಅಜಯ್ ಮಾಕನ್ ವಿರುದ್ಧ ಆರೋಪ ಹೊರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News