ಆದಿತ್ಯನಾಥ್ ಗೆ ತಲೆನೋವಾಗಿರುವ ಕೇಸರಿ ದಾಂಧಲೆ

Update: 2017-04-25 03:51 GMT

ಲಕ್ನೋ, ಎ.25: ಉತ್ತರ ಪ್ರದೇಶದಲ್ಲಿ ಸಂಘಪರಿವಾರ ಸಂಘಟನೆಗಳ ದಾಂಧಲೆಗಳು ಹೆಚ್ಚುತ್ತಿರುವುದು ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದು ಆರಂಭಿಕ ಹಂತದಲ್ಲೇ ಸರಕಾರಕ್ಕೆ ಮುಜುಗರವನ್ನೂ ತಂದೊಡ್ಡಿದೆ.

ಕಾನೂನು ಹಾಗೂ ಸುವ್ಯವಸ್ಥೆ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಆದಿತ್ಯನಾಥ್ ಸ್ಪಷ್ಟ ಸಂದೇಶ ರವಾನಿಸಿರುವುದು ಚಂಚಲ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಶುಕ್ರವಾರ ನಡೆದ ಸಹರಣಪುರ ಹಿಂಸಾಚಾರ ಸೇರಿದಂತೆ ಸರಣಿ ಘಟನಾವಳಿಗಳು ಬಿಜೆಪಿ ಸರಕಾರದ ನಿದ್ದೆಗೆಡಿಸಿವೆ.

ಸ್ಥಳೀಯ ಸಂಸದ ರಾಘವ್ ಲಖನ್‌ಪಾಲ್ ನೇತೃತ್ವದ ಬಿಜೆಪಿ ಕಾರ್ಯಕರ್ತರು, ಎ.20ರಂದು ಸಾಧಕ್ ದುಧ್ಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಲ್ಲಾಡಳಿತದ ಅನುಮತಿ ಇಲ್ಲದೆ ಶೋಭಾಯಾತ್ರೆಯನ್ನು ಕೈಗೊಂಡಿದ್ದರು. ಈ ಮೆರವಣಿಗೆ ಮೇಲೆ ಮುಸ್ಲಿಂ ಸಮುದಾಯದವರು ಕಲ್ಲೆಸದರು ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಇದಕ್ಕೆ ಪ್ರತೀಕಾರವಾಗಿ ಬಿಜೆಪಿ ಕಾರ್ಯಕರ್ತರು ವಿಭಾಗಾಧಿಕಾರಿಯ ಕಾರನ್ನು ಧ್ವಂಸಗೊಳಿಸಿ, ಸಹರಣಪುರ ಹಿರಿಯ ಪೊಲೀಸ್ ಅಧೀಕ್ಷಕರ ನಿವಾಸದ ಮೇಲೂ ದಾಳಿ ಮಾಡಿದ್ದರು.

ಸಿಎಂ ಈ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಸೋಮವಾರ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಿ, ಎಂಟು ಮಂದಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News