ಗುಪ್ತಚರ ಇಲಾಖೆಯ ವೈಫಲ್ಯವೇ ಸಿಆರ್ ಪಿಎಫ್ ಯೋಧರ ಮಾರಣ ಹೋಮಕ್ಕೆ ಕಾರಣ

Update: 2017-04-25 06:49 GMT
ನಕ್ಸಲರ ದಾಳಿಗೆ ಸಿಲುಕಿ ಹುತಾತ್ಮರಾದ ಯೋಧರು 

 ರಾಯ ಪುರ,ಎ.25: ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ  25 ಮಂದಿ ಸಿಆರ್ ಪಿಎಫ್ ಯೋಧರ  ಸಾವಿಗೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
 ರಸ್ತೆ ಲೋಕಾರ್ಪಣೆ ಕಾರ್ಯಕ್ರಮಕ್ಕೆಸಿಆರ್ ಪಿಎಫ್  ಯೋಧರನ್ನು ನಿಯೋಜಿಸಲಾಗುವ  ವಿಚಾರವನ್ನು ಮೊದಲೇ  ಅರಿತುಕೊಂಡಿದ್ದ  ನಕ್ಸಲರು ಯೋಧರ ಹತ್ಯೆಗೆ ದೊಡ್ಡ ಯೋಜನೆ ರೂಪಿಸಿದ್ದರು. ಆದರೆ  ಈ ವಿಚಾರ ಯೋಧರಿಗೆ  ತಿಳಿಯದೇ ಹೋಗಿತ್ತು.

ಸುಮಾರು  300 ನಕ್ಸಲರು ಸ್ಥಳದಲ್ಲಿ ಅವಿತು ಕುಳಿತಿದ್ದರೂ ಗುಪ್ತಚರ ಇಲಾಖೆಗೆ ಇದರ ಮಾಹಿತಿಯೇ ಇರಲಿಲ್ಲ ಎನ್ನಲಾಗಿದೆ.
ಯೋಧರ ಮೇಲೆ ದಾಳಿ ನಡೆಸಲು ನಕ್ಸಲರು ಸ್ಥಳೀಯರ ನೆರವು ಪಡೆದಿದ್ದರು. ಯೋಧರ ಸಂಖ್ಯೆಗಿಂತ ನಕ್ಸಲರ ಸಂಖ್ಯೆ ಮೂರು ಪಟ್ಟು ಜಾಸ್ತಿ ಇತ್ತು. ಇದರಿಂದಾಗಿ ಯೋಧರಿಗೆ ನಕ್ಸಲರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ  ಎಂದು ಅಧಿಕಾರಿಗಳು ಹೇಳಿದ್ದಾರೆ.

 ಬೇಸ್ ಕ್ಯಾಂಪ್ ಸುತ್ತಮುತ್ತ  ಭಾರೀ ಸಂಖ್ಯೆಯಲ್ಲಿ ನಕ್ಸಲರು ಓಡಾಡಿಕೊಂಡಿದ್ದರೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಭದ್ರತೆಯಲ್ಲಿ ಭಾರಿ ಪ್ರಮಾಣದ ಲೋಪವಾಗಿರುವುದು ಎಲ್ಲದಕ್ಕೂ ಕಾರಣವಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News