ಗ್ಯಾಸ್ ಸಿಲಿಂಡರ್ ಹ್ಯಾಂಡಲ್‌ನಲ್ಲಿ ಸಿಕ್ಕಿಬಿದ್ದ ಮಗು: ಹೊರತೆಗೆದ ಅಗ್ನಿಶಾಮಕ ದಳ

Update: 2017-04-26 06:45 GMT

ಕೊಡಿಯತ್ತೂರ್(ಕೇರಳ),ಎ. 26: ಗ್ಯಾಸ್ ಸಿಲಿಂಡರ್‌ನ ಹ್ಯಾಂಡಲ್‌ನ ಎಡೆಯಲ್ಲಿ ಸಿಕ್ಕಿಬಿದ್ದ ಎರಡು ವರ್ಷದ ಹೆಣ್ಣುಮಗುವನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಚೆರುವಾಡಿ ಪರಯಂಙಡ್‌ಎಂಬಲ್ಲಿನ ಲಿನಿಶ್ ಎಂಬವರ ಮಗಳು ಐರಿನ್ ಆಮಿನಾ ಮುಕ್ಕಂ ಅಗ್ನಿಶಾಮಕ ದಳ ತಂಡ ಕಟ್ಟರ್ ಬಳಸಿ ಸಿಲಿಂಡರ್‌ನ ಹ್ಯಾಂಡಲ್‌ನ್ನು ಕತ್ತರಿಸಿ ಮಗುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಮಂಗಳವಾರ ಮಧ್ಯಾಹ್ನ ಎರಡುಗಂಟೆಗೆ ಘಟನೆ ನಡೆದಿತ್ತು. ಮಗುವಿನ ಸೊಂಟದ ಕೆಳಗೆ ಪೂರ್ಣವಾಗಿ ಹ್ಯಾಂಡಲ್‌ನೊಳಗೆ ಸಿಲುಕಿತ್ತು. ಮನೆಯವರು ಮಗುವನ್ನು ಸಿಲಿಂಡರ್ ಹ್ಯಾಂಡಲ್‌ನಿಂದ ಬಿಡಿಸಿಕೊಳ್ಳಲು ತುಂಬಪ್ರಯತ್ನಿಸಿ ವಿಫಲರಾಗಿದ್ದರು. ನಂತರ ಅಗ್ನಿಶಾಮಕ ದಳಕ್ಕೆ ಸುದ್ದಿಮುಟ್ಟಿಸಿದ್ದರು. ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಸಹಾಯಕ ಸ್ಟೇಶನ್ ಅಧಿಕಾರಿ ಸಿ.ಕೆ.ಮುರಳೀಧರನ್, ಲೀಡಿಂಗ್ ಫಯರ್‌ಮೆನ್ ರಾಮಚಂದ್ರನ್ ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News