×
Ad

ಪಶ್ಚಿಮ ಬಂಗಾಳದಲ್ಲಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರೇಮ ಕಹಾನಿ ಬರೆದ ವಿದ್ಯಾರ್ಥಿಗಳು ಅಮಾನತು

Update: 2017-04-30 10:39 IST

ಕೋಲ್ಕತಾ, ಎ.30: ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಲಾ ಕಾಲೇಜೊಂದರ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರೇಮ ಕಥೆ , ಹಿಂದಿ ಮತ್ತು ಬಂಗಾಳಿ ಚಿತ್ರದ ಹಾಡುಗಳನ್ನು ಬರೆದು ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಕೈಯಾರೆ  ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಮಾಲ್ಡಾದ ಬಾಲ್ಗುರ್ಘಾಟ್ ಲಾ ಕಾಲೇಜ್ನ  ಹತ್ತು ವಿದ್ಯಾರ್ಥಿಗಳು ಮೂರನೆ  ಸೆಮಿಸ್ಟೆರ್ ಪರೀಕ್ಷೆಯಲ್ಲಿ ತಮ್ಮ ಪ್ರೇಮ ಕಥೆ ಮತ್ತು ಹಿಂದಿ ಮತ್ತು ಬಂಗಾಳಿ ಚಿತ್ರದ ಹಾಡುಗಳನ್ನು ಬರೆದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ.

ಈ ಪ್ರಕರಣದ ತನಿಖೆಗೆ ರಚಿಸಲಾದ ಸಮಿತಿಯ ಶಿಫಾರಸ್ಸಿನಂತೆ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ಪರೀಕ್ಷಾ ನಿಯಂತ್ರಕರಾದ ಸನಾತನ ದಾಸ್ ಮಾಹಿತಿ ನೀಡಿದ್ದಾರೆ

 ಗವರ್ ಗಂಗಾ ವಿಶ್ವವಿದ್ಯಾಲಯಕ್ಕೆ ಸೇರಿದ ಬಾಲ್ಗುರ್ಘಾಟ್ ಲಾ ಕಾಲೇಜ್ನ  150ವಿದ್ಯಾಥಿಗಳು ಕಳೆದ ವರ್ಷ ಪರೀಕ್ಷೆ ಬರೆದಿದ್ದರು. ಇವರಲ್ಲಿ 40 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News