ಶಾಸಕರು ಸಾಮಾನ್ಯರಂತಿರಬೇಕು : ಪಕ್ಷದ ಶಾಸಕರಿಗೆ ಕೇಜ್ರಿವಾಲ್ ಕರೆ

Update: 2017-05-05 09:24 GMT

ಹೊಸದಿಲ್ಲಿ,ಮೇ 5: ಶಾಸಕರ ನಡೆ, ನುಡಿ ಸಾಮಾನ್ಯರ ಮನಸ್ಸನ್ನು ಪರಿವರ್ತಿಸುವಂತಿರಬೇಕು ಎಂದು ಆಮ್‌ಆದ್ಮಿಪಾರ್ಟಿ ನಾಯಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪಕ್ಷ ಜನಸಾಮಾನ್ಯರದ್ದು. ಸಾಮಾನ್ಯರನ್ನೇ ನಾವು ಅನುಸರಿಸಬೇಕು. ಅವರು ಧರಿಸುವಂತಹ ಬಟ್ಟೆಯನ್ನೇ ನಾವು ಧರಿಸಬೇಕು ಎಂದು ಪಕ್ಷದ ಶಾಸಕರನ್ನು ಕೇಜ್ರಿವಾಲ್ ಆಗ್ರಹಿಸಿದ್ದಾರೆ.

   ನಗರಸಭಾಚುನಾವಣೆಯ ಸೋಲಿನ ಬಳಿಕ ಕೇಜ್ರಿವಾಲ್ ಒಬ್ಬೊಬ್ಬರನ್ನೇ ಭೇಟಿಯಾಗಿದ್ದಾರೆ. ಪಕ್ಷ ಎದುರಿಸುತ್ತಿರುವ ಸಮಸ್ಯೆಗಳನು ಕೇಳಿ ತಿಳಿದು ಕೊಂಡಿದ್ದಾರೆ. ಕೇಜ್ರಿವಾಲ್ ಪಕ್ಷ ಸೋಲಿಗೆ ಮತಯಂತ್ರದ ಲೋಪ ಕಾರಣ ಎಂದು ಹೇಳಿದ್ದಾರೆ.

 ಆದರೆ ಇದೊಂದೆ ಕಾರಣವಲ್ಲ. ಪಕ್ಷದ ನೀತಿ ಮರುಪರಿಶೀಲನೆಗೊಳ್ಳಬೇಕೆನ್ನುವ ಬೇಡಿಕೆಎದ್ದಿದೆ. ಈ ಹಿನ್ನೆಲೆಯಲ್ಲಿ ಶಾಸಕರನ್ನು ಒಬ್ಬಬ್ಬರನ್ನಾಗಿ ಭೇಟಿಯಾಗಿ ಪಕ್ಷದ ವೈಫಲ್ಯದ ಬಗ್ಗೆ ಕಾರಣಗಳನ್ನು ವಿಚಾರಿಸಿ ತಿಳಿದುಕೊಂಡಿದ್ದಾರೆ.

 ಪಾರ್ಟಿಯ ನಾಯಕರು ಜನಸಾಮಾನ್ಯರಿಂದ ದೂರವುಳಿಯುತ್ತಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದರಿಂದ ಕೇಜ್ರಿವಾಲ್ ಜನಸಾಮಾನ್ಯರಂತೆ ಜನಸಾಮಾನ್ಯರ ನಡುವೆ ಇರಿ ಎಂದು ಶಾಸಕರನ್ನು ಆಗ್ರಹಿಸಿದ್ದಾರೆ. ಪಕ್ಷದ ಅಲ್ಪಸಂಖ್ಯಾತ ನಾಯಕ ಅಮಾನತ್ತುಲ್ಲಾ ಖಾನ್‌ರ ಅಮಾನತು ಪಕ್ಷಕ್ಕೆ ಹಾನಿಯಾಗಬಹುದೇ ಎನ್ನುವ ಶಂಕೆಯೂ ಕೇಜ್ರಿವಾಲ್‌ರನ್ನು ಕಾಡುತ್ತಿದೆ.

 ಇದೇವೇಳೆ ದಿಲ್ಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವುದನ್ನು ನಿರಾಕರಿಸಿದ್ದಾರೆ. ಅವರು ಕಳೆದ ವಿಧಾನಸಭಾ ಚುನಾವಣೆ ಮೊದಲು ಆಮ್ ಆದ್ಮಿ ಪಕ್ಷ  ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News