ಒಬ್ಬ ಭಾರತೀಯನ ತಲೆಗೆ ನೂರು ಪಾಕಿಸ್ತಾನಿ ಸೈನಿಕರ ತಲೆತೆಗೆಯಬೇಕು: ರಾಮ್‌ದೇವ್

Update: 2017-05-05 09:38 GMT

ಹೊಸದಿಲ್ಲಿ,ಮೇ 5: ಒಬ್ಬ ಭಾರತೀಯ ಸೈನಿಕನ ತಲೆಗೆ ಬದಲಾಗಿ 100 ಪಾಕಿಸ್ತಾನಿ ಸೈನಿಕರ ತಲೆ ತೆಗೆಯಬೇಕೆಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಪತಂಜಲಿ ಕಂಪೆನಿಯ ವರ್ಷಾಚರಣೆ ಕುರಿತು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಭಾರತೀಯ ಸೈನಿಕರ ವಿರುದ್ಧ ಪಾಕಿಸ್ತಾನಿ ಸೈನಿಕರು ನಡೆಸುತ್ತಿರುವ ಕ್ರೌರ್ಯಕ್ಕೆ ಹಿಂಜರಿಯದೆ ಪ್ರತೀಕಾರ ತೀರಿಸಬೇಕಾಗಿದೆ. ಇದಕ್ಕೆ ನಾವು ಇಸ್ರೇಲನ್ನು ಮಾದರಿಯಾಗಿ ಪರಿಗಣಿಸಬೇಕು ಎಂದು ರಾಮ್‌ದೇವ್ ಹೇಳಿದರು.

ಸ್ವದೇಶಿ ಉತ್ಪನ್ನಗಳ ಬೆಲೆ ಸ್ವಲ್ಪ ಹೆಚ್ಚಾದರೂ ಅದನ್ನೇ ಖರೀದಿಸಿ ಎಂದು ಅವರುವಿನಂತಿಸಿದ್ದಾರೆ. ಕಳೆದ ಗುರುವಾರ ಗಡಿಯಲ್ಲಿ ಪಾಕ್ ಸೈನಿಕರು ಇಬ್ಬರು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ್ದರು. ಆದರೆ ನಾವು ಭಾರತದ ಸೈನಿಕರ ತಲೆಕತ್ತರಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರಲುಇಂತಹ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯದ ವಕ್ತಾರ ನಫೀಸ್ ಝಕರಿಯ ಟ್ವೀಟರ್ ಮೂಲಕ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News