ಹೀಗೆ ಉಡುಗೊರೆ ನೀಡುವ ಪೈಲಟ್ ನಿಮ್ಮ ವಿಮಾನದಲ್ಲಿ ಬರಬಹುದು !

Update: 2017-05-09 12:00 GMT

ಪೈಲಟ್, ವಿಮಾನದ ಇತರ ಸಿಬ್ಬಂದಿಗಳು ಪ್ರಯಾನಿಕರ ಮೇಲೆ ಹಲ್ಲೆ ಮಾಡುವ ವರದಿಗಳು ಬರುತ್ತಿರುವ ಈ ದಿನಗಳಲ್ಲಿ . ಪೈಲಟ್ ಒಬ್ಬರು ತಮ್ಮ ಪ್ರಯಾಣಿಕರನ್ನು ಖುಷಿಪಡಿಸಲು ಹೊಸ ವಿಧಾನವನ್ನು ಆಯ್ದುಕೊಂಡಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗಿದೆ. ಮೇ 3ಕ್ಕೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್‌ಮಾಡಲಾಗಿದೆ. ಈಗಾಗಲೇ ವೀಡಿಯೊವನ್ನು 2.1 ಮಿಲಿಯನ್‌ಗೂ ಅಧಿಕ ಮಂದಿ ನೋಡಿದ್ದಾರೆ. ಪೈಲೆಟ್ ತಮ್ಮ ಪ್ರಯಾಣಿಕರಿಗೆ ಉಡುಗೊರೆ ನೀಡುವ ದೃಶ್ಯವೀಡಿಯೊದಲ್ಲಿದೆ.

ಈ ವೀಡಿಯೊವನ್ನು ಜೆನಿಫರ್ ಟಾಡ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟಾಡ್ ಏರಲೈನ್ಸ್ ಒಂದರಲ್ಲಿ ಫ್ಲೈಟ್ ಅಟಂಡೆಂಟ್ ಆಗಿ ದುಡಿಯುತ್ತಿದ್ದಾರೆ. ವೀಡಿಯೊದಲ್ಲಿ ವಿಮಾನದ ಪೈಲಟ್ , ಕ್ಯಾಪ್ಟನ್ ಜಾನ್ ಚಾರ್ಲ್ಸ್ ರಿಚಿ ಇಂಟರ್‌ಕಾಮ್‌ನಲ್ಲಿ ತಾನು ಈ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿರುವುದಕ್ಕೆ 22ವರ್ಷ ಪೂರ್ತಿಯಾಯಿತು. ಈ ಸಂದರ್ಭದಲ್ಲಿಅ ವರು ಪ್ರಯಾಣಿಕರ ಮುಂದೆ ಎಲ್ಲ ವಿವರಗಳನ್ನು ಇಟ್ಟರು. ಅವರು ಈ ವರೆಗೆ  ಒಟ್ಟು ಹತ್ತು ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ ಎಂದು ಹೇಳಿದಾಗ ಎಲ್ಲ ಪ್ರಯಾಣಿಕರು ಖುಷಿಪಟ್ಟರು.

ಹತ್ತು ಲಕ್ಷ ನಂಬರ್‌ನಲ್ಲಿ ಯಾವ ಪ್ರಯಾಣಿಕರು ಇರುತ್ತಾರೆ ಅವರಿಗೆ ಪೈಲಟ್ ಬಹುಮಾನ ಘೋಷಿಸಿದರು. ಆ ನಂಬರ್‌ನಲ್ಲಿ ಓರ್ವ ಮಹಿಳೆ ಕುಳಿತಿದ್ದರು. ಅವರು ಆ ಮಹಿಳೆಗೆ ಶಾಂಪೈನ್ ಬಾಟ್ಲಿ ಉಡುಗೊರೆ ಕೊಟ್ಟರು. ಜೊತೆಗೆ ಅವರ ಬೋರ್ಡಿಂಗ್ ಪಾಸ್‌ನಲ್ಲಿ ತಮ್ಮ ಆಟೋಗ್ರಾಫ್‌ನ್ನು ಕೂಡಾ ಕೊಟ್ಟರು. ಪೈಲಟ್ ಆ ಮಹಿಳೆ ಈ ವಿಮಾನದ ಟಕೆಟ್ ಗೆ ಎಷ್ಟು ಹಣ ಖರ್ಚು ಮಾಡಿ ಬಂದಿದ್ದಾರೆ ಎನ್ನುವುದನ್ನು ಕೂಡ ಕಂಡುಹುಡುಕಿದ ಪೈಲಟ್ ಒಂದು ಕವರ್‌ನಲ್ಲಿ ಆ ಹಣ ಕೊಟ್ಟರು, ಇತರೆ ಉಡುಗೊರೆಗಳನ್ನು ಕೂಡಾ ಕೊಟ್ಟರು. ಈ ವೀಡಿಯೊ ಈವರೆಗೆ 13000 ಬಾರಿ ಶೇರ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News