×
Ad

ಅರ್ನಬ್ ರಿಂದ ‘ಸುಪಾರಿ ಪತ್ರಿಕೋದ್ಯಮ’ ಎಂದು ಟ್ವೀಟ್ ಮಾಡಿದ ರಾಹುಲ್ ಕನ್ವಲ್!

Update: 2017-05-11 11:11 IST

ಮುಂಬೈ, ಮೇ 11: "ಟೈಮ್ಸ್ ನೌ" ಚಾನಲ್ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿ ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದ ಅರ್ನಬ್ ಗೋಸ್ವಾಮಿ ಮೇ 6ರಂದು ತಮ್ಮ ಹೊಸ ಚಾನಲ್ ರಿಪಬ್ಲಿಕ್ ಚಾನಲ್ ಅನ್ನು ಭಾರೀ ಗಡದ್ದಾಗಿ ಆರಂಭಿಸಿ ಆರ್‌ಜೆಡಿ ನಾಯಕ ಲಾಲು ಯಾದವ್ ಹಾಗೂ ಶಶಿ ತರೂರ್ ನಡುವಣ ಸಂಭಾಷಣೆಯ ಟೇಪ್ ಪ್ರಸ್ತುತಪಡಿಸಿ ಬಹಳಷ್ಟು ಸುದ್ದಿ ಮಾಡಿದ್ದಾರೆ.

ಈ ಚಾನಲ್ ಬಿಜೆಪಿ ಪ್ರೇಷಿತವೆಂಬರ್ಥದ ಸುದ್ದಿ ಬರುತ್ತಿರುವಂತೆಯೇ ಖ್ಯಾತ ಪತ್ರಕರ್ತ ರಾಹುಲ್ ಕನ್ವಲ್ ಟ್ವೀಟೊಂದನ್ನು ಮಾಡಿ ವಿವಾದಕ್ಕೀಡಾಗಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ರಿಪಬ್ಲಿಕ್ ಟಿವಿ ಆರಂಭ ಕುರಿತು ಮಾಹಿತಿ ನೀಡುವ ಬಿಜೆಪಿ ಸಮರ್ಥಕನದ್ದೆಂದು ಹೇಳಲಾದ ಪೋಸ್ಟ್ ಒಂದನ್ನು ಟ್ವೀಟ್ ಮಾಡಿ ಹೀಗೆಂದು ಅವರು ಬರೆದಿದ್ದಾರೆ. ‘‘ಒಂದು ಪಕ್ಷ ಒಂದು ಟಿವಿ ಚಾನಲ್ ಬೆಂಬಲಿಸಲು ಸರ್ವ ರೀತಿಯ ಪ್ರಯತ್ನ ಮಾಡುತ್ತಿದೆ. ಶೇ. 100 ತಾರತಮ್ಯ ಶೇ. 0 ವಸ್ತುನಿಷ್ಠತೆ. ಸುಪಾರಿ ಪತ್ರಿಕೋದ್ಯಮ !’’ ಎಂದಿದ್ದಾರೆ.

ಆದರೆ ರಾಹುಲ್ ಕನ್ವಲ್ ಅವರು ಶೇರ್ ಮಾಡಿದ ಪೇಜ್ ಬಿಜೆಪಿಯ ಅಧಿಕೃತ ಪೇಜ್ ಆಗಿರದೇ ಇರುವುದರಿಂದ ಪಕ್ಷದ ಐಟಿ ಘಟಕದ ಅಮಿತ್ ಮಾಲವಿಯ ರಾಹುಲ್ ಪೋಸ್ಟ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ‘‘ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕು,’’ ಎಂದು ಹೇಳಿದ್ದಾರೆ. ಇದೇ ವಿಚಾರದಲ್ಲಿ ಅನೇಕ ಟ್ವಿಟ್ಟರಿಗರು ರಾಹುಲ್ ಕನ್ವಲ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಇದಕ್ಕೂ ಮುಂಚೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಝಾ ಅವರು ಟ್ವೀಟೊಂದನ್ನು ಮಾಡಿ ಈ ಚಾನಲ್ ಅನ್ನು ಬಹಿಷ್ಕರಿಸಬೇಕೆಂದು ಸೂಚ್ಯವಾಗಿ ಹೇಳಿದ್ದರಲ್ಲದೆ ಅದನ್ನು ಬಿಜೆಪಿ ಪ್ರಾಯೋಜಿಸಿದೆಯೆಂದೂ ಆಪಾದಿಸಿದ್ದರು.

ಈ ಹಿಂದೆ ಅರ್ನಬ್ ಟೈಮ್ಸ್ ನೌ ನಲ್ಲಿದ್ದಾಗ ಖ್ಯಾತ ಪತ್ರಕರ್ತೆ ಬರ್ಖಾ ದತ್ತ್ ಕೂಡ ಅವರ ಕಟು ಟೀಕಾಕಾರರಾಗಿದ್ದರಲ್ಲದೆ ಅವರು ಮೋದಿ ಸರಕಾರದ ಚಮಚಾಗಿರಿ ಮಾಡುತ್ತಿದ್ದಾರೆಂದು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News