ಒಂದು ಬೀದಿ ನಾಯಿಯನ್ನು ಸೆರೆ ಹಿಡಿದರೆ 2100ರೂ. !

Update: 2017-05-17 06:18 GMT

ತಿರುವನಂತಪುರಂ,ಮೇ 17: ಬೀದಿನಾಯಿಗಳನ್ನು ಸೆರೆಹಿಡಿಯುವ ಕುಟುಂಬಶ್ರಿ ಮೈಕ್ರೋ ಘಟಕ ವೇತನ ಹೆಚ್ಚಿಸಿದೆ. ಒಂದು ಬೀದಿ ನಾಯಿ ಹಿಡಿದು ತಂದವರಿಗೆ 2100ರೂಪಾಯಿ ವೇತನ ನೀಡಲುಅದು ನಿರ್ಧರಿಸಿದೆ.

ಇದಕ್ಕಿಂತ ಮೊದಲು ಒಂದು ನಾಯಿಯನ್ನು ಸೆರೆ ಹಿಡಿದರೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು. ಕೇರಳದಲ್ಲಿ 306 ಕುಟುಂಬಶ್ರೀ ಸದಸ್ಯರು 58 ಘಟಕಗಳಲ್ಲಿ ಬೀದಿನಾಯಿ ಹಿಡಿಯುವಕೆಲಸ ಮಾಡುತ್ತಿದ್ದಾರೆ. ಅತಿಹೆಚ್ಚು ನಾಯಿ ಹಿಡಿಯುವವರಿರುವ ಹನ್ನೆರಡು ಯುನಿಟ್ ತೃಶೂರ್‌ನಲ್ಲಿದೆ. ಐದು ಮಂದಿಯ ಅತಿ ಚಿಕ್ಕ ಎರಡು ಘಟಕ ಕ್ಯಾಲಿಕಟ್ ನಲ್ಲಿದೆ.

ವಿವಿಧ ಪಂಚಾಯತ್‌ಗಳಲ್ಲಿ ಘಟಕಗಳನ್ನು ರೂಪಿಸಿ ಕುಟುಂಬ ಶ್ರೀ ಯೋಜನೆಯ ಅನ್ವಯ 2000 ಮಂದಿಗೆ ತರಬೇತಿ ನೀಡಲಾಗಿತ್ತು. 2016ರಲ್ಲಿ ಸರಕಾರ ಘಟಕಗಳಿಗೆ ಅಂಗೀಕಾರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News