×
Ad

ಕೇರಳದಲ್ಲಿ ಶಾಲಾ ಕೆಲಸದ ದಿನಗಳು 200ಕ್ಕೆ ಏರಿಕೆ : ಕೇರಳ ಸರಕಾರ

Update: 2017-05-21 16:41 IST

ತಿರುವನಂತಪುರಂ, ಮೇ 21: ಮುಂದಿನ ಅಧ್ಯಯನ ವರ್ಷದಿಂದ ಶಾಲೆಯ ಕೆಲಸದ ದಿನಗಳನ್ನು200ಕ್ಕೇರಿಸಿ ಕೇರಳಸರಕಾರ ವಿದ್ಯಾಭ್ಯಾಸ ಕ್ಯಾಲಂಡರ್ ತಯಾರಿಸಿದೆ. ಆಗಸ್ಟ್ ಎಂಟು, ಸೆಪ್ಟಂಬರ್ 16, 23 ಅಕ್ಟೋಬರ್ 2, ಜನವರಿ ಆರು, 27 ಹೀಗೆ ಆರು ಶನಿವಾರಗಳಲ್ಲಿ ಶಾಲೆ ತೆರೆದಿಡಲು ಗುಣಮಟ್ಟ ಪರಿಶೀಲನಾ ಸಮಿತಿ ತೀರ್ಮಾನಿಸಿದೆ.

 ಅಧ್ಯಾಪಕರಿಗೆ ಪ್ರತಿ ಅವಧಿಯಲ್ಲಿ ಒಂದು ಗುಂಪು ತರಬೇತಿ ಇರಲಿದೆ. ಆದರೆ,ಶಾಲಾ ಕೆಲಸದ ದಿನಗಳಲ್ಲಿ ಮಾತ್ರ ತರಬೇತಿ ಇರುವುದಿಲ್ಲ. ಮಕ್ಕಳಿಗೆ ತರಗತಿ ಕಳಕೊಳ್ಳದಂತೆ ಮಕ್ಕಳನ್ನು ವಿವಿಧ ಕಾರ್ಯಕ್ರಮಗಳಿಗಾಗಿ ಹೊರಗೆ ಕರೆದುಕೊಂಡು ಹೋಗಲು ಮಕ್ಕಳ ಹೆತ್ತವರಿಂದ ನೆರವನ್ನು ಪಡೆಯಲಾಗುತ್ತದೆ.

ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಯಾವ ರೀತಿಯ ತರಬೇತಿಗಳೂ ಇಲ್ಲ. ಪಿಎಸ್‌ಸಿ ಪರೀಕ್ಷೆಗಳು ಶಾಲಾ ಕೆಲಸದ ದಿನಗಳಲ್ಲಿ ಬಂದರೆ ಆವಿಷಯವನ್ನು ಪಿಎಸ್‌ಸಿಯ ಗಮನಕ್ಕೆ ತಂದು ಬೇರೊಂದು ದಿವಸಕ್ಕೆ ಪರೀಕ್ಷೆಯನ್ನು ಬದಲಾಯಿಸಲು ಆಗ್ರಹಿಸಲಾಗುವುದು. ಮುಖ್ಯೋಪಾಧ್ಯಾಯರು, ಅಧ್ಯಾಪಕರ ಸಂಘಟನೆ ಪ್ರತಿನಿಧಿಗಳ ಮುಂತಾದ ಸಭೆಗಳು ಶನಿವಾರವೇ ನಡೆಸಬೇಕಾಗಿದೆ.

ಕಳೆದ ವರ್ಷವೇ 200 ಅಧ್ಯಯನ ದಿವಸಗಳ ಗುರಿ ಇರಿಸಲಾಗಿತ್ತು. ಆದರೆ ಗರಿಷ್ಠ 172 ದಿವಸಗಳು ಮಾತ್ರವೇ ಶಾಲೆ ನಡೆದಿದೆ. ಇದರಲ್ಲಿ ಪರೀಕ್ಷೆಗಳೂ ಸೇರಿವೆ.ಇದನ್ನೆಲ್ಲ ಪರಿಗಣಿಸಿ ಗರಿಷ್ಠ ಅಧ್ಯಯನ ದಿನಗಳನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಓಣಂ ಪರೀಕ್ಷೆ ಆಗಸ್ಟ್ 21 -31ಮತ್ತು ಕ್ರಿಸ್‌ಮಸ್ ಪರೀಕ್ಷೆ ಡಿಸೆಂಬರ್ 13-22ರವರೆಗೆ ನಡೆಯಲಿವೆ. ಎಲ್.ಎಸ್‌ಎಸ್ ಹಾಗೂ ಯುಎಸ್‌ಎಸ್ ಪರೀಕ್ಷೆಗಳು ಫೆಬ್ರವರಿ 17ಕ್ಕೆ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News