×
Ad

ಉ.ಪ್ರದೇಶದಲ್ಲಿ ಹಳಿ ತಪ್ಪಿದ ಮುಂಬೈ-ಲಕ್ನೋ ಎಕ್ಸ್ ಪ್ರೆಸ್ ರೈಲು

Update: 2017-05-21 17:18 IST

ಉನ್ನಾವ್(ಉ.ಪ್ರ),ಮೇ 21: ಮುಂಬೈ-ಲಕ್ನೋ ಲೋಕಮಾನ್ಯ ಟಿಳಕ್ ಎಕ್ಸ್ ಪ್ರೆಸ್ ರೈಲಿನ 11 ಬೋಗಿಗಳು ರವಿವಾರ ಇಲ್ಲಿ ಹಳಿ ತಪ್ಪಿವೆ. ಅದೃಷ್ಟವಶಾತ್ ರೈಲು ಈ ಸಮಯದಲ್ಲಿ ನಿಧಾನವಾಗಿ ಚಲಿಸುತ್ತಿದ್ದರಿಂದ ಭಾರೀ ದುರಂತವೊಂದು ತಪ್ಪಿಹೋಗಿದ್ದು, ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ರೈಲು ಉನ್ನಾವ್ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 3ಕ್ಕೆ ಆಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಎಸ್‌ಪಿ ನೇಹಾ ಪಾಂಡೆ ತಿಳಿಸಿದರು. ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಿ ಅವರ ತಾಣಗಳಿಗೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಘಟನಾ ಸ್ಥಳದಲ್ಲಿ ತಪಾಸಣೆಗಾಗಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳ ತಂಡವೊಂದು ಆಗಮಿಸಿದೆ ಎಂದೂ ಅವರು ತಿಳಿಸಿದರು.

ಅವಘಡದಲ್ಲಿ ರೈಲ್ವೆ ಹಳಿಗಳಿಗೂ ಹಾನಿಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News