ನೀರು , ಖರ್ಜೂರದಲ್ಲಿ ಉಪವಾಸ ತೊರೆದು ಶಾರ್ಜಾದಿಂದ ಅಜ್ಮಾನ್ ಗೆ ಪ್ರತಿದಿನ ನಡೆದುಕೊಂಡು ಹೋದ ಆ ದಿನಗಳು ...

Update: 2017-05-30 07:19 GMT

ಅಜ್ಮಾನ್,ಮೇ 30 : ಅಜ್ಮಾನ್ ನಲ್ಲಿ ವಾಸಿಸುವ ಭಾರತೀಯ ವಲಸಿಗರೊಬ್ಬರು ದೇಶದಲ್ಲಿ ತಾವು ಆಚರಿಸಿದ ಪ್ರಥಮ ರಮಝಾನ್ ನೆನಪಿಸಿಕೊಂಡಿದ್ದು ತಾವು ಹೇಗೆ ಶಾರ್ಜಾದ ತಮ್ಮ ಕೆಲಸದ ಸ್ಥಳದಿಂದ ಅಜ್ಮಾನ್ ನ ತನ್ನ ಮನೆಗೆ ನಡೆದುಕೊಂಡು ಬಂದು ಇಫ್ತಾರ್ ಸಂದರ್ಭ ಕೇವಲ ಖರ್ಜೂರ ಮತ್ತು ನೀರು ಸೇವಿಸಿ ಬದುಕುತ್ತಿದ್ದೆ ಎಂಬುದನ್ನು ವಿವರಿಸಿದ್ದಾರೆ.

ಹೈದರಾಬಾದ್ ನಗರದಿಂದ ಅಜ್ಮಾನ್ ಗೆ 1990ರಲ್ಲಿ ತೆರಳಿದ್ದ 51 ವರ್ಷದ ಸಯ್ಯದ್ ಅಲಿ ಮಖ್ಸೂದ್ ಎಂಬವರು ಅಲ್ಲಿ ತಮ್ಮ ಆರಂಭದ ದಿನಗಳು ಕಷ್ಟಕರವಾಗಿತ್ತು ಎಂದು ನೆನಪಿಸುತ್ತಾರೆ. ಇಂದು ಅವರಿಗೆ ನಾಲ್ಕು ಮಕ್ಕಳಿದ್ದು ಅವರೆಲ್ಲರೂ ತಮ್ಮ ಉಪವಾಸ ತೊರೆದ ನಂತರ ದೊಡ್ಡ ತಟ್ಟೆ ತುಂಬಾ ಬಿರಿಯಾನಿ ಸೇವಿಸುತ್ತಾರೆ. ಶಾರ್ಜಾದಲ್ಲಿ ಫೋಟೋ ಸ್ಟುಡಿಯೋ ಹೊಂದಿದ್ದ ನನ್ನ ಹಿರಿಯ ಸಹೋದರನ ಜತೆ ನಾನು ಕೆಲಸ ಮಾಡುತ್ತಿದ್ದೆ. ಸಹರಿ ಸಂದರ್ಭ ನಾವು ಆ ದಿನಗಳಲ್ಲಿ ರೊಟ್ಟಿ, ಹಾಲು ಮತ್ತು ಸಿಹಿ ಸೇವಿಸುತ್ತಿದ್ದೆವು, ಎಂದು ನೆನಪಿಸುತ್ತಾರೆ.

‘‘ನನ್ನ ಪತ್ನಿ ನಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಳು, ನಾವು ಅಜ್ಮಾನ್ ನಲ್ಲಿ ವಾಸವಾಗಿದ್ದೆವು. ಸಹರಿ ನಂತರ ನನ್ನ ದಿನಚರಿ 7 ಗಂಟೆಗೆ ಆರಂಭವಾಗುತ್ತಿತ್ತು. ನನ್ನ ಸಹೊದರ ನನಗೆ ಸ್ಟುಡಿಯೋ ತನಕ ಕರೆದೊಯ್ಯುತ್ತಿದ್ದ. ಸಂಜೆ ಹಿಂದಿರುಗಿದ ನಂತರ ಉಪವಾಸವನ್ನು ಒಂದು ಬಾಟಲಿ ನೀರು ಮತ್ತು ಕೆಲ ಖರ್ಜೂರಗಳೊಂದಿಗೆ ತೊರೆಯುತ್ತಿದ್ದೆ. ಅಜ್ಮಾನ್ ಗೆ ಪ್ರತಿ ದಿನ ನಾನು ನಡೆದುಕೊಂಡೇ ಹೋಗುತ್ತಿದ್ದ ಸಂದರ್ಭ ನನ್ನ ಮೈಯ್ಯಲ್ಲಿ ಇಳಿಯುತ್ತಿದ್ದ ಬೆವರು ಹಾಗೂ ಕಾಲುಗಳಲ್ಲಿನ ಸೆಳೆತ ಇನ್ನೂ ನೆನಪಿದೆ,’’ ಎನ್ನುತ್ತಾರೆ ಅವರು.

‘‘ಈಗ ಅಲ್ಲಾಹನ ಕೃಪೆಯಿಂದ ನಮ್ಮ ಸ್ಥಿತಿ ಚೆನ್ನಾಗಿದೆ. ನಾಲ್ಕು ಮಂದಿ ಮಕ್ಕಳೂ ಚೆನ್ನಾಗಿದ್ದಾರೆ. ನಮ್ಮ ಪ್ರತಿ ಸಹರಿ ಮತ್ತು ಇಫ್ತಾರ್ ಬಹಳಷ್ಟು ಧನ್ಯತೆಗಳಿಂದ ತುಂಬಿರುತ್ತದೆ. ನನಗೆ ಈ ದೇಶದಿಂದ ದೊರಕ್ಕಿದ್ದಕ್ಕೆಲ್ಲ ಹಾಗೂ ಅಲ್ಲಾಹನ ಕೃಪೆಗೆ ನಾನು ಚಿರಋಣಿ’’.

ಈಗ ನಾನು ಮತ್ತು ನನ್ನ ನಾಲ್ಕು ಮಕ್ಕಳು ಅಜ್ಮಾನ್ ನಲ್ಲಿ ವಾಸಿಸುತ್ತಿದ್ದೇವೆ. ಈಗಿನ ವ್ಯತ್ಯಾಸವೆಂದರೆ ಇಫ್ತಾರ್ ಗೆ ನಾವು ಹೊಟ್ಟೆ ತುಂಬಾ ಆಹಾರ ಸೇವಿಸುತ್ತೇವೆ.

- ಮಖ್ಸೂದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News