ದಿಲ್ಲಿ ಸರಕಾರದ ಔಷಧಿ ಹಗರಣ; ಎಸಿಬಿ ತನಿಖೆ ಆರಂಭ
ಹೊಸದಿಲ್ಲಿ, ಜೂ.1: ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದ ಔಷಧಿ ಖರೀದಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಎಸಿಬಿ ಇಂದು ತನಿಖೆ ಆರಂಭಿಸಿದೆ.
ಎಸಿಬಿ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಆರೋಪಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಕಲೆ ಹಾಕಿದೆ.
ಇದರೊಂದಿಗೆ ಆಪ್ ಸರಕಾರ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ.
ಔಷಧಿ ಖರೀದಿಯಲ್ಲಿ ದಿಲ್ಲಿಯ ಆರೋಗ್ಯ ಇಲಾಖೆಯಿಂದ ೩೦೦ ಕೋಟಿ ರೂ.ಗಳ ಅವ್ಯಹಾರ ನಡೆದಿದೆ ಮತ್ತು ಈ ಅವ್ಯವಹಾರದಲ್ಲಿ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶಾಮಿಲಾಗಿದ್ದಾರೆ ಎಂದು ಮಾಜಿ ಸಚಿವ ಕಪಿಲ್ ಶರ್ಮ ಅವರು ಆರೋಪ ಮಾಡಿದ್ದರು.
ವಾಹನ ಕಂಪೆನಿಗಳು ಹನ್ನೊಂದು ಲಕ್ಷ ರೂ.ಗೆ ಆಂಬುಲೆನ್ಸ್ ವಾಹನಗಳ ಪೂರೈಕೆಗೆ ಒಪ್ಪಿದ್ದರೂ ಸರಕಾರ 100ಆಂಬುಲೆನ್ಸ್ ವಾಹನಗಳನ್ನು 23 ಲಕ್ಷ ರೂ.ಗೆ ಖರೀದಿಸಿದೆ. ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್ ವೈದರ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಸರಕಾರದ ನಿಯಮವನ್ನು ಗಾಳಿಗೆ ತೂರಿದ್ದರು ಎಂದು ಕಪಿಲ್ ಶರ್ಮ ಅಪಾದಿಸಿದ್ದಾರೆ.