ಸಿಬಿಎಸ್‌ಇ 10ನೆ ತರಗತಿಯ ಫಲಿತಾಂಶ ಪ್ರಕಟ

Update: 2017-06-03 08:26 GMT

ಹೊಸದಿಲ್ಲಿ, ಜೂ.3: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ)10ನೆ ತರಗತಿಯ ಪರೀಕ್ಷಾ ಫಲಿತಾಂಶ ಶನಿವಾರ ಮಧ್ಯಾಹ್ನ ದೇಶಾದ್ಯಂತ ಪ್ರಕಟವಾಗಿದೆ.

ಅಲಹಾಬಾದ್, ಚೆನ್ನೈ, ದಿಲ್ಲಿ, ಡೆಹ್ರಾಡೂನ್ ಹಾಗೂ ತ್ರಿವಂಡ್ರಮ್ ವಲಯಗಳ ಫಲಿತಾಂಶ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿದೆ. ಇತರ ವಲಯಗಳ ಫಲಿತಾಂಶ ಅಪ್‌ಲೋಡ್ ಆಗುವ ಪ್ರಕ್ರಿಯೆಯಲ್ಲಿದೆ ಎಂದು ಸಿಬಿಎಸ್‌ಇಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ವರ್ಷದಲ್ಲಿ 16,67,969 ವಿದ್ಯಾರ್ಥಿಗಳು 10ನೆ ತರಗತಿಯ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಹಾಗೂ ಹೆತ್ತವರು ಸಿಬಿಎಸ್‌ಇ ಕಚೇರಿಗಳಿಗೆ ಫಲಿತಾಂಶ ನೋಡಲು ತೆರಳದಂತೆ ಸೂಚಿಸಲಾಗಿದೆ. ಸಿಬಿಎಸ್‌ಇ ಕಚೇರಿಗಳಲ್ಲಿ ಫಲಿತಾಂಶ ಲಭಿಸುವುದಿಲ್ಲ. ಬೋರ್ಡ್ ಆಫೀಸ್‌ಗೆ ತೆರಳಿ ಫಲಿತಾಂಶವನ್ನು ಸಂಗ್ರಹಿಸಬಹುದು ಎಂದು ಸಿಬಿಎಸ್‌ಇ ಪ್ರಕಟನೆಯೊಂದರಲ್ಲಿ ತಿಳಸಿದೆ. ಮೇ 28 ರಂದು ಸಿಬಿಎಸ್‌ಇ 12ನೆ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ 1 ಶೇ.ರಷ್ಟು ಕಡಿಮೆ ಫಲಿತಾಂಶ ದಾಖಲಾಗಿತ್ತು. ಹೀಗಾಗಿ 10ನೆ ತರಗತಿಯ ಫಲಿತಾಂಶದ ಬಗ್ಗೆ ಆತಂಕ ಹಾಗೂ ಕುತೂಹಲ ಮೂಡಿದೆ.

ವಿದ್ಯಾರ್ಥಿಗಳು www.cbseresults.nic.in   www.cbse.nic.in  www.results.nic.in ಆನ್‌ಲೈನ್‌ನಲ್ಲಿ ಫಲಿತಾಂಶವನ್ನು ಪಡೆಯಬಹುದು. ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ವಿದ್ಯಾರ್ಥಿಗಳು, ಪೋಷಕರು ಪರದಾಟ ನಡೆಸುತ್ತಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News