ಹೆನೋದ್ಯಮಕ್ಕೆ ಕನ್ನ

Update: 2017-06-11 18:34 GMT

2015 ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅದು ಗೋವು, ಎತ್ತು ಹಾಗೂ ಹೋರಿಗಳ ಹತ್ಯೆಯನ್ನು ನಿಷೇಧಿಸಿದ ಪರಿಣಾಮವಾಗಿ ರಾಜ್ಯದ ಹೈನುಗಾರಿಕೆ ಅರ್ಥ ವ್ಯವಸ್ಥೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲವಾಗಿತ್ತು. ಸರಕಾರದ ಹೊಸ ನಿಯಮಗಳು ಹೈನುಗಾರಿಕೆ ಅರ್ಥವ್ಯವಸ್ಥೆಯ ಕತ್ತನ್ನು ಇನ್ನಷ್ಟು ಹಿಚುಕಲಿವೆ ಎನ್ನುತ್ತಾರೆ ರೈತರು.

ಮೇ  ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರಕಾರ ಜಾನುವಾರು ಮಾರುಕಟ್ಟೆಗಳಲ್ಲಿ ಹತ್ಯೆಗಾಗಿ ಹಾಗೂ ರೈತರಲ್ಲದವರಿಗೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿ ಹೊಸ ನಿಯಮಗಳನ್ನು ಜಾರಿಗೆ ತಂದ ಸುದ್ದಿಯನ್ನು ನ್ಯೂಸ್ ಚಾನೆಲ್‌ಗಳು ಹಾಗೂ ವರ್ತಮಾನ ಪತ್ರಿಕೆಗಳು ವರದಿ ಮಾಡುತ್ತಿದ್ದಂತೆಯೇ ನಂದಾ ಶೆಲ್ಕೆಗೆ ಆಶ್ಚರ್ಯ ಹಾಗೂ ಆಘಾತವಾಯಿತು.

ಅಹ್ಮದ್ ನಗರದ ಕೊಪರಗಾಂವ್ ತಾಲೂಕಿನ ಯಸಗಾಂವ್‌ನ 55 ರ ಹರೆಯದ ಭೂರಹಿತ ಡೇರಿ ರೈತಳಾಗಿರುವ ಶೆಲ್ಕೆ ‘ಈ ಆಜ್ಞೆಯಿಂದಾಗಿ ತಮ್ಮ ಪಾಲಿಗೆ ಇನ್ನ್ನು ಹಾಲು ಇಲ್ಲವಾದಂತೆಯೇ. ಹಸುಗಳನ್ನು ಇನ್ನೂ ಮುಂದೆ ವರ್ತಕರಿಗೆ ಮಾರುವಂತಿಲ್ಲವಾದಲ್ಲಿ ಹಸುಗಳನ್ನು ಸಾಕುವುದನ್ನೇ ಬಿಡಬೇಕಾಗುತ್ತದೆ’ ಎಂದಿದ್ದಾಳೆ.

2015 ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅದು ಗೋವು, ಎತ್ತು ಹಾಗೂ ಹೋರಿಗಳ ಹತ್ಯೆಯನ್ನು ನಿಷೇಧಿಸಿದ ಪರಿಣಾಮವಾಗಿ ರಾಜ್ಯದ ಹೈನುಗಾರಿಕೆ ಅರ್ಥ ವ್ಯವಸ್ಥೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲವಾಗಿತ್ತು. ಸರಕಾರದ ಹೊಸ ನಿಯಮಗಳು ಹೈನುಗಾರಿಕೆ ಅರ್ಥವ್ಯವಸ್ಥೆಯ ಕತ್ತನ್ನು ಇನ್ನಷ್ಟು ಹಿಚುಕಲಿವೆ ಎನ್ನುತ್ತಾರೆ ರೈತರು.

‘ರೈತರಲ್ಲದವರಿಗೆ ಜಾನುವಾರುಗಳನ್ನು ಮಾರುವಂತಿಲ್ಲ ಎಂದಾಗ ಈ ನಿಯಮಗಳಿಂದ ಲಾಭವಾಗುವುದು ವಧಾಗೃಹ ಗಳನ್ನು ನಡೆಸುವ ಮಂದಿಗೆ ಮಾತ್ರ. ಯಾಕೆಂದರೆ ನಾವು ಬೇರೆ ಯವರಿಗೆ ಮಾರುವಂತಿಲ್ಲ ಎಂದಾಗ ಈ ಮಂದಿ ಒಂದು ಪ್ರಾಣಿಗೆ 15 ಸಾವಿರ ರೂ. ಕೊಡುವ ಬದಲು 5 ಸಾವಿರ ರೂ. ಕೊಡುತ್ತಾರೆ’ ಎಂದು ಕೊಪರಗಾಂವ್‌ನ ಹಳ್ಳಿ ಡಾಚ್ ಖುರ್ದ್‌ನ ಇನ್ನೊರ್ವ ರೈತ ಶೋಯೆಬ್ ಸೈಯದ್ ಹೇಳಿದರು. ಮಾಂಸ ವ್ಯಾಪಾರವಷ್ಟೇ ಅಲ್ಲ, ಡೇರಿ ವ್ಯಾಪಾರ ಕುಸಿಯಲಿದೆ, ಯಾಕೆಂದರೆ ರೈತರು ಹೇಳು ವಂತೆ ಇನ್ನು ಮುಂದೆ ಜಾನುವಾರುಗಳನ್ನು ಇಟ್ಟುಕೊಳ್ಳುವುದು ಲಾಭದಾಯಕವಲ್ಲ.

ವ್ಯಾಪಾರಿಯ ಮಹತ್ವ

‘‘ಜಾನುವಾರು ವ್ಯಾಪಾರಿಗಳಲ್ಲದೇ ಬೇರೆ ಯಾರೂ ಮುದಿ ಯಾದ ನಮ್ಮ ಹಸುಗಳನ್ನು ಕೊಂಡುಕೊಳ್ಳುವುದಿಲ್ಲ. ಅವರೇ ಸಾಮಾನ್ಯವಾಗಿ ನಮ್ಮ ಮನೆಗೆ ಬರುತ್ತಾರೆ. ನಾವು ಸಂತೆಗೆ ಹೋಗು ವುದಿಲ್ಲ’’ ಎನ್ನುತ್ತಾರೆ ಸಮೀರ್ ನಿಕೋಲೆ. ರೈತರು ತಮ್ಮ ಜಾನುವಾರುಗಳನ್ನು ಒಂದೋ ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ತಕರಿಗೆ ಅಥವಾ ವರ್ತಕರದ್ದೇ ಆದ ಜಾಲಗಳ ಮೂಲಕ ಮಾರುತ್ತಾರೆ. ಎರಡು ಜಾನುವಾರುಗಳನ್ನು 15 ಕಿ.ಮೀ ಸಾಗಿಸಲು 500 ರೂ. ತಗಲುವುದರಿಂದ ಅವರು ಸಾಮಾನ್ಯವಾಗಿ ಅವುಗಳನ್ನು ಸಾಗಿಸುವುದಿಲ್ಲ. ವರ್ತಕರು ಅವುಗಳನ್ನು ಅಹ್ಮದ್‌ನಗರದಲ್ಲಿರುವ ಲೋನಿ ಜಾನುವಾರು ಮಾರುಕಟ್ಟೆಯಂತಹ ದೊಡ್ಡ ಮಾರ್ಕೆಟ್‌ಗಳಿಗೆ ಅಥವಾ ವಧಾಗೃಹಗಳಿಗೆ ಕೊಂಡೊಯ್ಯುತ್ತಾರೆ. ಕೊಳ್ಳುವ ವರ್ತಕರು ಸಿಗದಿದ್ದಾಗ ಅವರು (ರೈತರು) ಒಂದೋ ಅನಿವಾರ್ಯವಾಗಿ ಅವುಗಳನ್ನು ಮನೆಯಲ್ಲಿ ಸಾಕುತ್ತಾರೆ ಅಥವಾ ಎಲ್ಲೋ ಜಾಗ ಸಿಕ್ಕಲ್ಲಿ ಅವುಗಳನ್ನು ಬಿಟ್ಟು ಬಿಡುತ್ತಾರೆ. ಮಾರುಕಟ್ಟೆಯಲ್ಲಿ ಕೊಳ್ಳುವ ಒಂದು ಹೊಸ ಹಸುವಿಗೆ 50 ರಿಂದ 60 ಸಾವಿರ ರೂ. ತೆರಬೇಕಾಗಬಹುದು. ಹಾಲು ಕೊಡುವು ದನ್ನು ನಿಲ್ಲಿಸಿದ ಹಸು 10 ಸಾವಿರ ರೂ. ಗೆ ಮಾರಾಟವಾದರೆ ಹಾಲು ಕೊಡುವ ಹಸುವಿಗೆ ತಾನು ವ್ಯಾಪಾರಿಯಿಂದ 40 ಸಾವಿರ ರೂ. ನಿರೀಕ್ಷಿಸುತ್ತೇನೆ ಎನ್ನುತ್ತಾರೆ ನಿಕೋಲೆ. ಹಾಲು ನೀಡುವ ಎಮ್ಮೆಗೆ 80 ಸಾವಿರ ರೂ. ಕೊಡಬೇಕಾಗಬಹುದು.

ಎಮ್ಮೆಗಳು ಲಾಭದಾಯಕವಾಗಲಾರವು

2015ರ ನಿಷೇಧದಲ್ಲಿ ಎಮ್ಮೆಗಳು ಸೇರಿರಲಿಲ್ಲ. ಕೇಂದ್ರ ಸರಕಾರದ ಹೊಸ ಆಜ್ಞೆಯಲ್ಲಿ ಅವೂ ಸೇರಿವೆ. ಹೀಗಾಗಿ ರೈತರ ಆದಾಯಕ್ಕೆ ಅನಿರೀಕ್ಷಿತ ಏಟು ಬಿದ್ದಿದೆ.

‘ನಾವು ಬರಡು ಎಮ್ಮೆಯೊಂದನ್ನು ಮಾರಿದರೆ ಮಾತ್ರ ವೆಚ್ಚ ಮಾಡಿದ ಹಣ ಹಿಂದೆ ಬರುತ್ತದೆ’ ಎಂದು ಮೂರು ಎಮ್ಮೆಗಳನ್ನು ಹೊಂದಿರುವ ಶೋಯೆಬ್ ಸೈಯದ್ ಹೇಳಿದರು. ‘ವ್ಯಾಪಾರಿ ಅದಕ್ಕೆ ಕನಿಷ್ಠ 15 ಸಾವಿರ ರೂ. ಕೊಡುತ್ತಾನೆ. ಈ ಮೊತ್ತದ ನೆರವಿನಿಂದ 80 ಸಾವಿರದಿಂದ ಒಂದು ಲಕ್ಷದ ವರೆಗೆ ಬೆಲೆಯಿರುವ ಒಂದು ಹೊಸ ಎಮ್ಮೆಯನ್ನು ನಾವು ಕೊಂಡುಕೊಳ್ಳಬಹುದು’

ಎಮ್ಮೆಗಳಿಗೆ ಪ್ರತಿದಿನ ಆರುಬಾರಿ ಮೇವು ಹಾಕಬೇಕು. ಮೂರು ವರ್ಷದ ಎಮ್ಮೆ ಕರುಹಾಕಿ ಹಾಲು ಕೊಡಲು ಆರಂಭಿ ಸಿದರೆ ಎಮ್ಮೆಗೆ 15ರಿಂದ 20 ವರ್ಷ ಆಗುವವರೆಗೂ ಅದು ಹಾಲು ಕೊಡುತ್ತದೆ. ಆಮೇಲೆ ಅದನ್ನು ಮಾರಬೇಕು.

ಮಹಾರಾಷ್ಟ್ರದಲ್ಲಿ ಡೇರಿ ವ್ಯಾಪಾರ

ಮಹಾರಾಷ್ಟ್ರವು ಭಾರತದಲ್ಲಿ ಹಾಲು ಉತ್ಪಾದಿಸುವ ಏಳನೆಯ ಅತಿದೊಡ್ಡ ರಾಜ್ಯ. ಅಹ್ಮದ್ ನ್ಯಾಶನಲ್ ಡೇರಿ ಡೆವಲಪ್‌ಮೆಂಟ್‌ನ 2015ನೆಯ ಒಂದು ವರದಿಯ ಪ್ರಕಾರ ಅಹ್ಮದ್‌ನಗರ ರಾಜ್ಯದಲ್ಲೇ ಗರಿಷ್ಠ ಹಾಲು ಉತ್ಪಾದಿ ಸುವ ಜಿಲ್ಲೆ. ವರದಿಯ ಪ್ರಕಾರ 2013-2014ರಲ್ಲಿ 14 ಲಕ್ಷ ಮೆಗಾ ಟನ್ ಹಾಲು ಉತ್ಪಾದಿಸಿದ ಈ ಜಿಲ್ಲೆಯಲ್ಲಿ ಹಾಲು ನೀಡುವ 5.9 ಲಕ್ಷ ಹಸುಗಳಿದ್ದವು.

ಜಿಲ್ಲೆಯ ಸಮಗ್ರ ಪರಿಸರ ವ್ಯವಸ್ಥೆ ಸಹಕಾರಿ ಚೌಕಟ್ಟಿನ ಸುತ್ತ ನಿರ್ಮಿಸಲ್ಪಟ್ಟಿದೆ. ಇದು ಗುಜರಾತಿನ ಯಶಸ್ವಿ. ಅಮುಲ್ ಮಾದರಿಯನ್ನಾಧರಿಸಿ ನಿರ್ಮಿತವಾದ ವ್ಯವಸ್ಥೆ. ತನ್ನ ಮನೆ ಯಿಂದ ಆರು ಕಿ.ಮೀ ದೂರದಲ್ಲಿರುವ ಗೋದಾವರಿ ಖೋರೆ ಸಹಕಾರಿ ದೂದ್ ಉತ್ಪಾದಕ್ ಸಂಘ ಲಿ.ಗೆ ಶೆಲ್ಕೆ ಹಾಲು ಮಾರುತ್ತಾಳೆ. ಅವಳ ಮನೆಯಲ್ಲಿ ದಿನವೊಂದರ ಸುಮಾರು ಹತ್ತು ಲೀಟರ್ ಹಾಲು ಕೊಡುವ ಮೂರು ಹಸುಗಳಿಂದ ಅವಳ ಆದಾಯ ಅರ್ಧ ಭಾಗ ಬಂದರೆ ಉಳಿದ ಅರ್ಧ ಅವಳ ಇತರರ ಫಾರ್ಮ್‌ಗಳಲ್ಲಿ ಮಾಡುವ ಕೆಲಸದಿಂದ ಬರುತ್ತದೆ. ದಿನವೊಂದರ ಅವಳು ಒಟ್ಟು 600ರಿಂದ 630 ರೂ. ಯಷ್ಟು ಸಂಪಾದಿಸುತ್ತಾಳೆ. ಹಸುವೊಂದರ ಮೇವಿಗಾಗಿ 200 ರೂ. ಯಂತೆ ಅವಳ ಈ ಆದಾಯ ಸಂಪೂರ್ಣವಾಗಿ ಮೇವಿಗೆ ಖರ್ಚಾಗುತ್ತದೆ. ಉಳಿಯುವ ಹಣ ಅವಳ ಲಾಭ!

ಐದು ವರ್ಷಗಳ ಹಿಂದಿನವರೆಗೆ ಅವಳ ಬಳಿ ಐದು ಹಸುಗಳಿದ್ದಾಗ ಅವಳ ಸ್ಥಿತಿ ಪರವಾಗಿರಲಿಲ್ಲ. ಆದರೆ ಬಳಿಕ ಬಂದ ಬರಗಾಲದಿಂದಾಗಿ ಅವಳು ತಾನು ತಲಾ 80 ಸಾವಿರ ರೂ.ಗೆ ಕೊಂಡುಕೊಂಡಿದ್ದ ಎರಡು ಹಸುಗಳನ್ನು 30 ಸಾವಿರ ರೂ. ಹಾಗೂ 25 ಸಾವಿರ ರೂ. ಗೆ ಮಾರಬೇಕಾಯಿತು. ಹಿಂದೆ ನಾವು ಹಸುಗಳನ್ನು ವರ್ತಕರಿಗೆ ಮಾರುತ್ತಿದ್ದೆವು. ಈಗ ಮಾರಕೂಡದು ಎಂದರೆ ನಾವು ನಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು, ಶಿಕ್ಷಣ ಕೊಡಿಸುವುದು ಹೇಗೆ? ಎಂದು ಕೇಳುತ್ತಾಳೆ ಶೆಲ್ಕೆ.

ಹಾಲಿನ ಬೆಲೆ ಏರಬಹುದು

ಹೊಸ ನಿಯಮಗಳಿಂದಾಗಿ ಹಾಲಿನ ಬೆಲೆ ಏರುವುದ ಲ್ಲದೇ ಅದರ ಉತ್ಪಾದನೆಯೂ ಕಡಿಮೆಯಾಗಬಹುದು. ರೈತರಿಗೆ ತಮ್ಮ ಹೊಟ್ಟೆಹೊರೆದುಕೊಳ್ಳುವುದೇ ಅಸಾಧ್ಯ ವಾದಾಗ ತಮ್ಮ ಹಸುಗಳನ್ನು ಮಾರಬಾರದೆಂದರೆ ಅವರು ಡೇರಿಗೆ ವಿದಾಯ ಹೇಳುತ್ತಾರೆ ಎಂದು ಕೊಪರ ಗಾಂವ್‌ನ ಗೋದಾವರಿ ಹಾಲು ಘಟಕದ ಆಡಳಿತ ನಿರ್ದೇಶಕ ಸಿ.ಎಸ್ ಗಢವೆ ಹೇಳಿದರು.

ಇಂದು ಪ್ರತಿದಿನ 112 ಹಳ್ಳಿಗಳಲ್ಲಿ 50 ಸಾವಿರ ಮನೆಗಳಿಂದ 1.5 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾ ಗುತ್ತದೆ. ದಿನವೊಂದರ 10 ಲೀಟರ್‌ಗಿಂತ ಹೆಚ್ಚು ಹಾಲು ಕೊಡುವ ಜಾನುವಾರುಗಳು ಮಾತ್ರ ಲಾಭದಾಯಕ. ಜೆರ್ಸಿ ಮತ್ತು ಹಾಲ್‌ಸ್ಟೀನ್- ಪ್ರಿಯಸಿಯನ್ ಹಸುಗಳು ಪ್ರತಿದಿನ 30ರಿಂದ 45 ಲೀಟರ್‌ನಷ್ಟು ಹಾಲು ಕೊಡು ತ್ತವೆ. ಹೀಗಾಗಿ ಸರಕಾರ ದೇಶಿಯ ತಳಿಗಳಿಗೆ ಮಾತ್ರ ಈ ಹೊಸ ನಿಯಮಗಳನ್ನು ಅನ್ವಯಿಸಬೇಕಿತ್ತು ಎನ್ನುವ ಗಢವೆಯ ಅಭಿಪ್ರಾಯವನ್ನು ಹಳ್ಳಿಯ ಬಹುಮಂದಿ ಅನುಮೋದಿಸಿದ್ದಾರೆ.

ಹೊಸ ನಿಯಮಗಳಿಂದಾಗಿ ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿ ಅದರ ಬೆಲೆಗಳು ಏರಲಿವೆ. ಕಳೆದ 15 ವರ್ಷಗಳಲ್ಲಿ ಜಾನುವಾರು ಸಾಕುವ ರೈತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ನೀರುಳ್ಳಿ ಬೆಲೆ ಕುಸಿದಿದೆ. ಹಾಲು ಮಾರಾಟವೊಂದೇ ರೈತರಿಗಿರುವ ಲಾಭದ ಮೂಲ. ಅದ್ದರಿಂದ ದಿಲ್ಲಿಯಲ್ಲಿ ಕುಳಿತಿರುವ ಆಳುವವರಿಗೆ ರೈತರ ಆರ್ಥಿಕ ಬೆಳವಣಿಗೆಯ ಬಗ್ಗೆ ನಿಜವಾದ ಕಾಳಜಿ ಇದೆಯೇ? ಎಂದು ತಮಗೆ ತಾವು ಕೇಳಿಕೊಳ್ಳಬೇಕಾಗಿದೆ.

1976 ರಲ್ಲಿ ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧಿಸಲಾ ಯಿತಾದರೂ ಅದು ಅಲ್ಲಿ ಗುಪ್ತವಾಗಿ ನಡೆಯುತ್ತಲೇ ಬಂದಿದೆ. ಎಲ್ಲಿ ಹೇಗೆ ಎಂಬ ಬಗ್ಗೆ ಹೇಳಲು ರೈತರಾಗಲಿ, ವ್ಯಾಪಾರಿಗಳಾಗಲಿ ಸಿದ್ಧರಿಲ್ಲ. ಈಗ ಹೊಸ ನಿಯಮಗಳಿಂದಾಗಿ ಜಾನುವಾರು ವ್ಯಾಪಾರಿಗಳು ಕೂಡ ಅವುಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದಾರೆ. ಅಹ್ಮದ್ ನಗರದಲ್ಲಿ ವಧಾಗೃಹಗಳಿಲ್ಲ. ಅವು ಇರುವ ಔರಂಗಾಬಾದ್‌ಗೆ ಜಾನುವಾರುಗಳನ್ನು ಸಾಗಿಸುವಾಗ ತಾವು ಪೊಲೀ ಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಭಯ ಅವರನ್ನು ಕಾಡುತ್ತಿದೆ. ಅವರಲ್ಲಿ ಹಲವರು ಜಾನುವಾರು ವ್ಯಾಪಾರ ವನ್ನೇ ತೊರೆದು ಬೇರೆ ವ್ಯಾಪಾರ ಮಾಡುವ ಯೋಚನೆ ಯಲ್ಲಿದ್ದಾರೆ.

Writer - ಮೃದುಲಾ ಚಾರಿ

contributor

Editor - ಮೃದುಲಾ ಚಾರಿ

contributor

Similar News

ಜಗದಗಲ
ಜಗ ದಗಲ