ಮೋಹನ್ ಭಾಗವತ್ ಅಂತಸ್ತಿಗೆ ರಾಷ್ಟ್ರಪತಿ ಹುದ್ದೆ ಸೂಕ್ತವಲ್ಲ: ಆರೆಸ್ಸೆಸ್

Update: 2017-06-17 05:29 GMT

ಹೊಸದಿಲ್ಲಿ, ಜೂ.17: ರಾಷ್ಟ್ರಪತಿ ಹುದ್ದೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೂಕ್ತ ಅಭ್ಯರ್ಥಿ ಎಂದು ಶಿವಸೇನೆ ಹೇಳಿದ್ದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ಶಿವಸೇನೆ ರಾಂಗ್ ನಂಬರ್ ಗೆ ಡಯಲ್ ಮಾಡಿದೆ ಎಂದು ಹೇಳಿದೆ.

"ಮೋಹನ್ ಭಾಗವತ್ ಅವರ ಮೇಲೆ ಶಿವಸೇನೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಧನ್ಯವಾದಗಳು. ಆದರೆ ಅದು ರಾಂಗ್ ನಂಬರ್ ಗೆ ಡಯಲ್ ಮಾಡಿದೆ. ಮೋಹನ್ ಭಾಗವತ್ ಅವರ ಅಂತಸ್ತು, ಅವರ  ವ್ಯಕ್ತಿತ್ವ ಹಾಗೂ ತಾತ್ವಿಕತೆಗೆ ನಾಗರಿಕ ಮತ್ತು ಸಾಂಸ್ಕತಿಕ ಆಯಾಮವಿದೆ. ಆದ್ದರಿಂದ ಮೋಹನ್ ಭಾಗವತ್ ಅಂತಸ್ತಿಗೆ ರಾಷ್ಟ್ರಪತಿ ಹುದ್ದೆ ಸೂಕ್ತವಲ್ಲ. ಅವರು ರಾಷ್ಟ್ರಪತಿ ಹುದ್ದೆಗೆ ಉತ್ತಮ ಆಯ್ಕೆಯಾಗುವುದಿಲ್ಲ ಎಂದು ಆರೆಸ್ಸೆಸ್ ನಾಯಕ ರಾಕೇಶ್ ಸಿನ್ಹಾ ಹೇಳಿದ್ದಾರೆ.

ಸ್ವತಃ ಭಾಗವತ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಲ್ಲದೆ ಅದೊಂದು "ಉತ್ತಮ ಮನರಂಜನಾತ್ಮಕ ಸುದ್ದಿ"ಯೆಂದು ಹೇಳಿದ್ದರು ಎಂದು ಸಿನ್ಹಾ ಹೇಳಿದ್ದು, ಅವರ ಈ ಹೇಳಿಕೆ ಎಲ್ಲಾ ಊಹಾಪೋಹಗಳನ್ನು ತೆರೆಗೆ ಎಳೆದಿದೆ ಎಂದಿದ್ದಾರೆ.

ಬುಧವಾರದಂದು ಶಿವಸೇನೆ ನಾಯಕ  ಸಂಜಯ್ ರಾವತ್ ಅವರು ಸುದ್ದಿಗಾರರೊಡನೆ ಮಾತನಾಡುತ್ತಾ ಬಿಜೆಪಿ ಇಲ್ಲಿಯ ತನಕ ರಾಷ್ಟ್ರಪತಿ ಅಭ್ಯರ್ಥಿಯ ವಿಚಾರದಲ್ಲಿ ನಮ್ಮ ಸಲಹೆ ಕೇಳಿಲ್ಲ. ಅದು ಈ ನಿಟ್ಟಿನಲ್ಲಿ ತ್ರಿಸದಸ್ಯ ಸಮಿತಿ ರಚಿಸಿದೆ ಎಂದು ತಿಳಿದು ಬಂದಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಈಗಾಗಲೇ ಭಾಗವತ್ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸಿದ್ದಾರೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News