ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ

Update: 2017-06-20 16:58 GMT

ಇಂಫಾಲ, ಜೂ. 20: ಅರುಣಾಚಲದ ಕೆಮಾಂಗ್‌ನಲ್ಲಿ ಮಂಗಳವಾರ ಬೆಳಗ್ಗೆ 10.01 ಗಂಟೆಗೆ 3.5 ಪರಿಮಾಣದ ಲಘು ಭೂಕಂಪ ಸಂಭವಿಸಿದೆ. ಮಣಿಪುರದ ಇಂಫಾಲ ನಗರದಲ್ಲಿ ಕೆಲವು ದಿನಗಳ ಹಿಂದೆ 4.4 ಪರಿಮಾಣದ ಲಘ ಭೂಕಂಪ ಸಂಭವಿಸಿತ್ತು.

 ಈ ಭೂಕಂಪದಿಂದ ಯಾವುದೇ ಜೀವ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ . ಈಶಾನ್ಯ ರಾಜ್ಯದಲ್ಲಿ ಈ ತಿಂಗಳು ಸಂಭವಿಸುತ್ತಿರುವ ನಾಲ್ಕನೇ ಭೂಕಂಪ ಇದಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News