ಕೋವಿಂದ್‌ಗೆ ಬೆಂಬಲ ಐತಿಹಾಸಿಕ ಮೂರ್ಖತನ: ಲಾಲು ಪ್ರಸಾದ್ ಯಾದವ್

Update: 2017-06-23 06:23 GMT

ಹೊಸದಿಲ್ಲಿ,ಜೂ. 23: ರಾಷ್ಟ್ರಪತಿಚುನಾವಣೆಯಲ್ಲಿ ಎನ್‌ಡಿಎಯ ಅಭ್ಯರ್ಥಿ ರಾಮನಾಥ್ ಕೋವಿಂದ್‌ರನ್ನು ಬೆಂಬಲಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ತೀರ್ಮಾನ ಐತಿಹಾಸಿಕ ಮೂರ್ಖತನವೆಂದು ಆರ್‌ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ಹೇಳಿದ್ದಾರೆ. ಪ್ರತಿಪಕ್ಷಗಳ ಮಹಾಘಟ್‌ಬಂಧನ್ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಜಿ ಲೋಕಸಭಾ ಸ್ಪೀಕರ್ ದಲಿತ ನಾಯಕಿ ಮೀರಾ ಕುಮಾರ್‌ರನ್ನು ಘೋಷಿಸಿದೆ. ವಿವಿಧ ಪಕ್ಷಗಳ ಬೆಂಬಲವನ್ನು ಪ್ರತಿಪಕ್ಷ ಯಾಚಿಸುತ್ತಿದೆ. ಇದರ ಭಾಗವಾಗಿ ನಿತೀಶ್ ಕುಮಾರ್‌ರನ್ನು ಜೊತೆ ನಿಲ್ಲಿಸಲು ಯತ್ನನಡೆಯುತ್ತಿದೆ. ಆದರೆ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್‌ರನ್ನು ಬೆಂಬಲಿಸುವುದಾಗಿ ನಿತೀಶ್ ಕುಮಾರ್ ಈ ಹಿಂದೆ ಹೇಳಿದ್ದರು.

ಬಿಹಾರದ ಪುತ್ರಿ ಮೀರಾ ಕುಮಾರ್‌ರನ್ನು ಬೆಂಬಲಿಸುವೆ ಮತ್ತು ನಿತೀಶ್‌ರಲ್ಲಿ ಬೆಂಬಲಿಸುವಂತೆ ವಿನಂತಿಸುವೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಇದು ಆಶಯದ ಘರ್ಷಣೆಯೆಂದು , ಬಿಜೆಪಿಯನ್ನು ಬೆಂಬಲಿಸುವುದು ಐತಿಹಾಸಿಕ ಮೂರ್ಖತನವೆಂದು ನಿತೀಶ್‌ರೊಡನೆ ಹೇಳುವೆ ಎಂದು ಲಾಲೂ ತಿಳಿಸಿದ್ದಾರೆ. ಆದರೆ ಇದು ಬಿಹಾರ ಸರಕಾರವನ್ನು ಬಾಧಿಸುವುದಿಲ್ಲ ಎಂದು ಅವರು ಹೇಳಿದರು. ಬಿಹಾರದಲ್ಲಿ ಕಾಂಗ್ರೆಸ್, ಲಾಲೂರ ಆರ್‌ಜೆಡಿ ನಿತೀಶ್ ಕುಮಾರ್‌ರ ಸಖ್ಯಪಕ್ಷಗಳು ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News