ಸರಕಾರ ಇಷ್ಟವಿಲ್ಲದಿದ್ದರೆ, ಪಿಂಚಣಿ ಪಡೆಯಬೇಡಿ, ರಸ್ತೆ ಬಳಸಬೇಡಿ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು !

Update: 2017-06-23 07:13 GMT

ಹೈದರಾಬಾದ್,ಜೂ. 23: ನಾನು ಕೊಡುವ ಪಿಂಚಣಿ ಪಡೆಯಲು , ಸರಕಾರ ನಿರ್ಮಿಸಿದ ರಸ್ತೆಗಳನ್ನು ಉಪಯೋಗಿಸಲು ನಾಚಿಕೆ ಆಗುವುದಿಲ್ಲವೇ. ಆದರೆ ಮತ ಹಾಕಲು ನಿಮಗೆ ಆಗುವುದಿಲ್ಲ ಅಲ್ಲವೇ. ಇದನ್ನು ಹೇಗೆ ಸಮರ್ಥಿಸಲು ಸಾಧ್ಯ ಎಂದು ಸರಕಾರವನ್ನು ಟೀಕಿಸುವವರೊಡನೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕೇಳಿದ್ದಾರೆ.

ಕರ್ನೂಲ್‌ನಲ್ಲಿ ನಡೆದ ಪಾರ್ಟಿಯ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ಸರಕಾರ ಇಷ್ಟವಿಲ್ಲದಿದ್ದರೆ ಪಿಂಚಣಿ ಪಡೆಯಬೇಡಿರಿ. ರಸ್ತೆಯನ್ನು ಉಪಯೋಗಿಸಬೇಡಿರಿ. ಸರಕಾರ ಜನರಿಗೆ ಹಲವಾರು ಸೌಕರ್ಯಗಳನ್ನು ಮಾಡಿಕೊಟ್ಟಿವೆ. ಆದ್ದರಿಂದ ಅವರೊಂದಿಗೆ ಮತ ಕೇಳಲು ಹಿಂಜರಿಯಬೇಕಾಗಿಲ್ಲ ಎಂದು ಅವರು ಪಕ್ಷದ ಕಾರ್ಯಕರ್ತರಲ್ಲಿ ಹೇಳಿದರು.

ಭ್ರಷ್ಟಾಚಾರದಿಂದ ಪಡೆದ ಹಣವನ್ನು ವಿತರಿಸುವ ಪಕ್ಷಗಳು ಇವೆ. ನನಗೂ ಹಣವನ್ನು ರಾಶಿರಾಶಿಯಾಗಿ ನೀಡಲು ಸಾಧ್ಯವಿದೆ. ಆದರೆ ಭ್ರಷ್ಟಾಚಾರದ ಪಾಲು ಜನರಿಗೆ ನೀಡಿದ ಬಳಿಕ ಜನರಿಂದ ಅದರ ನೂರು ಪಟ್ಟು ಕೊಳ್ಳೆಹೊಡೆಯುವುದರಲ್ಲಿ ನನಗೆ ಸಹಮತ ಇಲ್ಲ ಎಂದು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News