×
Ad

ಬೋಫೋರ್ಸ್:ಚರ್ಚೆಗೆ ಒತ್ತಾಯ

Update: 2017-06-23 22:50 IST

*  ಜೂ.24ರ ಈ ದಿನ 1989ರಲ್ಲಿ ಬೋಫೋರ್ಸ್ ಶಸ್ತ್ರಾಸ್ತ್ರ ಹಗರಣದ ಕುರಿತು ಲೋಕಸಭೆಯಲ್ಲಿ ಸಿಎಜಿ ಸಲ್ಲಿಸಿದ ವರದಿಯ ಕುರಿತು ಚರ್ಚೆಗೆ ಒತ್ತಾಯಿಸಿತು. ಆದರೆ ಸರಕಾರ ಒಪ್ಪಿಗೆ ನೀಡದಿದ್ದಾಗ ವಿರೋಧ ಪಕ್ಷದ ಬಹುತೇಕ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಸ್ವೀಡನ್ ಹಾಗೂ ಭಾರತ ಸರಕಾರದ ನಡುವೆ 1980-1990ರ ಅವಧಿಯಲ್ಲಿ ಸ್ವೀಡನ್‌ನ ಬೋಪೋರ್ಸ್ ಎಂಬ ಕಂಪೆನಿಗೆ ಶಸ್ತ್ರಾಸ್ತ್ರ ಖರೀದಿಗೆ ಮಾಡಿಕೊಂಡ ಗುತ್ತಿಗೆ ಒಪ್ಪಂದವಾಗಿತ್ತು.

  ಸಿಎಜಿ ವರದಿಯ ಪ್ರಕಾರ, ಒಪ್ಪಂದವು ಕನಿಷ್ಠ ಮಾನದಂಡಗಳನ್ನು ಮೀರಿ 328 ಕೋ.ರೂ. ಮೊತ್ತದ ಯುದ್ಧ ಸಾಮಗ್ರಿಗಳ ಖರೀದಿಗೆ ಸರಕಾರ ಆದೇಶ ನೀಡಿದೆ. ಖರೀದಿ ಗುತ್ತಿಗೆಯಲ್ಲೂ ಅಸ್ಪಷ್ಟತೆಯಿದೆ ಎಂಬುದಾಗಿತ್ತು. ಶಸ್ತ್ರಾಸ್ತ್ರ ಪೂರೈಕೆಯಲ್ಲಿ 72 ವಾರಗಳ ದೀರ್ಘ ಅವಧಿಯ ವಿಳಂಬವನ್ನು ಅದು ಉಲ್ಲೇಖಿಸಿತ್ತು. ವರದಿಯ ಪರಿಣಾಮ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ, ಚರ್ಚೆಗೆ ಪಟ್ಟು ಹಿಡಿದು, ವಿರೋಧಪಕ್ಷದ ಬಹುತೇಕ ಸದಸ್ಯರು ರಾಜೀನಾಮೆ ನೀಡಿದರು.

* 1763ರ ಈ ದಿನ ಈಸ್ಟ್ ಇಂಡಿಯಾ ಕಂಪೆನಿಯು ಮುರ್ಶಿದಾಬಾದನ್ನು ವಶಪಡಿಸಿಕೊಂಡಿತು ಮತ್ತು ಮೀರ್ ಜಾಫರ್‌ನನ್ನು ನವಾಬನನ್ನಾಗಿ ಘೋಷಿಸಿತು.

* 1961ರಲ್ಲಿ ಪ್ರಥಮ ಬಾರಿಗೆ ಭಾರತ ಎಚ್‌ಎಫ್24 ಸೂಪರ್‌ಸಾನಿಕ್ ಯದ್ಧ ವಿಮಾನವನ್ನು ಅಭಿವೃದ್ಧಿಪಡಿಸಿತು.

* 1990ರ ಈ ದಿನ ಭಾರತದ ರಕ್ಷಣಾ ವಿಜ್ಞಾನಿಗಳು ಪ್ರಥಮ 3ನೆ ಜೆನರೇಶನ್‌ನ ಯುದ್ಧ ಟ್ಯಾಂಕ್ ಪ್ರತಿರೋಧಕ ಕ್ಷಿಪಣಿಯನ್ನು ಪರೀಕ್ಷಿಸಿದರು.

* 1812ರಲ್ಲಿ ಫ್ರಾನ್ಸ್‌ನ ನೆಪೋಲಿಯನ್ ಬೋನಾಪಾರ್ಟೆ ನೇಮಾನ್ ನದಿಯನ್ನು ದಾಟಿ ರಶ್ಯಾದ ಮೇಲೆ ದಾಳಿ ಮಾಡಿದನು.

1901ರಲ್ಲಿ ಅದ್ಬುತ ಚಿತ್ರಕಾರ ಪ್ಯಾಬ್ಲೊ ಪಿಕಾಸೋನ ಚಿತ್ರಗಳ ಪ್ರಥಮ ಪ್ರದರ್ಶನ ಪ್ಯಾರಿಸ್‌ನಲ್ಲಿ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ