ಭಾರತೀಯ ಕರೆನ್ಸಿ ನೋಟುಗಳ ಹಿಂಬದಿಯಲ್ಲಿರುವ ಈ ಚಿತ್ರಗಳಿಗೆ ಏನು ಮಹತ್ವವಿದೆ...ಗೊತ್ತೇ?
ಆತ್ಮಸಂತೋಷ ಮತ್ತು ಭಾವನೆಗಳನ್ನು ಹೊರತುಪಡಿಸಿದರೆ ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎನ್ನುವ ಯಾವುದೂ ಇಲ್ಲ. ನಾವು ಪ್ರತಿದಿನ ಎಷ್ಟೋ ಹಣವನ್ನು ಖರ್ಚು ಮಾಡುತ್ತೇವೆ ಮತ್ತು ಕರೆನ್ಸಿ ನೋಟುಗಳನ್ನು ಬಳಸುತ್ತೇವೆ. ಆದರೆ ಈ ನೋಟುಗಳ ಮೇಲಿರುವ ವಿನ್ಯಾಸಗಳನ್ನು ಗಮನಿಸಲು ಎಂದಾದರೂ ಪುರುಸೊತ್ತು ಮಾಡಿಕೊಂಡಿ ದ್ದೀರಾ? ನೋಟುಗಳ ಮೇಲಿರುವ ಪ್ರತಿಯೊಂದೂ ಚಿತ್ರವು ತನ್ನದೇ ಆದ ಅರ್ಥವನ್ನು ಹೊಂದಿರುತ್ತದೆ ಮತ್ತು ಆ ಚಿತ್ರವು ಅಲ್ಲಿರಲು ಸಕಾರಣವೂ ಇರುತ್ತದೆ.
ಒಂದು ರೂ.ನೋಟು
ಈ ನೋಟಿನಲ್ಲಿ ತೈಲ ಬಾವಿಯ ಚಿತ್ರವಿದ್ದು, ಇದು ಕೈಗಾರಿಕಾ ಅಭಿವೃದ್ಧಿಯ ಮಹತ್ವದ ಸಂಕೇತವಾಗಿದೆ.
ಎರಡು ರೂ.ನೋಟು
ಈ ನೋಟಿನಲ್ಲಿ ಪ್ರಸಿದ್ಧ ಆರ್ಯಭಟ ಉಪಗ್ರಹದ ಚಿತ್ರವಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯ ಪ್ರಗತಿಯನ್ನು ಸೂಚಿಸುತ್ತದೆ.
ಐದು ರೂ.ನೋಟು
ಈ ನೋಟು ಕೃಷಿ ಯಾಂತ್ರೀಕರಣದ ಚಿತ್ರವನ್ನು ಹೊಂದಿದೆ. ಇದು ಕೃಷಿಕ್ಷೇತ್ರದಲ್ಲಿನ ಪ್ರಗತಿಯನ್ನು ಬಿಂಬಿಸುತ್ತದೆ.
10 ರೂ.ನೋಟು
ಈ ನೋಟಿನಲ್ಲಿ ಭಾರತದಲ್ಲಿಯ ವನ್ಯಜೀವಿಗಳ ಚಿತ್ರವಿದ್ದು, ಇದು ದೇಶದ ಜೀವ ವೈವಿಧ್ಯತೆಯನ್ನು ಸೂಚಿಸುತ್ತದೆ.
20 ರೂ.ನೋಟು
ಈ ನೋಟಿನಲ್ಲಿ ತಾಳೆಮರಗಳ ಚಿತ್ರವಿದ್ದು, ಇದು ಪೋರ್ಟ್ ಬ್ಲೇರ್‌ನ ವೌಂಟ್ ಹ್ಯಾರಿಯೆಟ್ ಲೈಟ್ ಹೌಸ್‌ನಿಂದ ಕಂಡ ನೋಟವಾಗಿದೆ.
50 ರೂ.ನೋಟು
ಇದು ದಿಲ್ಲಿಯ ಸಂಸತ್ ಭವನದ ಚಿತ್ರವನ್ನು ಹೊಂದಿದೆ. ಇದು ಭಾರತವು ಪ್ರಜಾಪ್ರಭುತ್ವ ದೇಶವಾಗಿದೆ ಎನ್ನುವುದರ ಸಂಕೇತವಾಗಿದೆ.
100 ರೂ.ನೋಟು
ಈ ನೋಟು ಹಿಮಾಲಯದ ಕಾಂಚನಗಂಗಾ ಶಿಖರದ ಚಿತ್ರ ಹೊಂದಿದ್ದು, ಭಾರತದ ಔನ್ನತ್ಯವನ್ನು ಬಿಂಬಿಸುತ್ತದೆ.
500 ರೂ.ನೋಟು
ಇದು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ದಿಲ್ಲಿಯ ಕೆಂಪುಕೋಟೆಯ ಚಿತ್ರವನ್ನು ಹೊಂದಿದೆ.
2,000 ರೂ.ನೋಟು
ಇದರ ಮೇಲೆ ಚಂದ್ರಯಾನದ ಚಿತ್ರ ಮುದ್ರಣಗೊಂಡಿದ್ದು, ಇದು ಭಾರತದ ಅತ್ಯಂತ ಪ್ರತಿಷ್ಠೆಯ ಬಾಹ್ಯಾಕಾಶ ಅಭಿಯಾನವನ್ನು ಪ್ರತಿನಿಧಿಸುತ್ತದೆ.