ಲಾಹೋರ್ ತೈಲ ಟ್ಯಾಂಕರ್ ಸ್ಫೋಟ: ಮೃತರ ಸಂಖ್ಯೆ 157ಕ್ಕೇರಿಕೆ

Update: 2017-06-26 17:13 GMT

ಲಾಹೋರ್, ಜೂ.26: ಪಾಕಿಸ್ತಾನದ ಪಂಜಾಬ್ ಪ್ರಾಂತದ ಪಟ್ಟಣವೊಂದರಲ್ಲಿ ರವಿವಾರ ಸಂಭವಿಸಿದ ಭೀಕರ ತೈಲ ಟ್ಯಾಂಕರ್ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 157ಕ್ಕೇರಿದೆ. ದುರಂತದಲ್ಲಿ ಮಡಿದ ಬಹುತೇಕ ಮಂದಿಯ ಮೃತದೇಹಗಳು ಗುರುತೂ ಸಿಗದಷ್ಟು ಸುಟ್ಟುಕರಕಲಾಗಿದ್ದು, ಬಂಧುಗಳಿಗೆ ತಮ್ಮ ಪ್ರೀತಿಪಾತ್ರರ ಶವಗಳನ್ನು ಗುರುತಿಸಲು ಅಸಾಧ್ಯವಾಗಿದೆ.

ಬಹಾವಾಲ್‌ಪುರ ಜಿಲ್ಲೆಯ ಅಹ್ಮದ್‌ಪುರ ಶರ್ಕಿಯಾದ ಹೆದ್ದಾರಿಯಲ್ಲಿ 40 ಸಾವಿರ ಲೀಟರ್ ಪೆಟ್ರೋಲ್ ಕೊಂಡೊಯ್ಯುತ್ತಿದ್ದ ತೈಲ ಟ್ಯಾಂಕರೊಂದು ನಿನ್ನೆ ಮಗುಚಿಬಿದ್ದುದರಿಂದ, ಅದರಲ್ಲಿದ್ದ ತೈಲವನ್ನು ಸಂಗ್ರಹಿಸಲು ನೂರಾರು ಮಂದಿ ಜಮಾಯಿಸಿದ್ದರು. ಆಗ ಹಠಾತ್ತನೆ ಟ್ಯಾಂಕರ್ ಸ್ಫೋಟಗೊಂಡು 100ಕ್ಕೂ ಅಧಿಕ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾದ ಸುಟ್ಟಗಾಯಗಳಿಗೆ ತುತ್ತಾಗಿದ್ದರು. ಗಾಯಾಳುಗಳಲ್ಲಿ ಇನ್ನೂ ಅನೇಕ ಮಂದಿ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಭೀತಿಯಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News