ಫೇಸ್‌ಬುಕ್‌ನಲ್ಲಿ ಈ ಮಾಹಿತಿಗಳನ್ನು ಪೋಸ್ಟ್ ಮಾಡುವುದನ್ನು ಈಗಲೇ ನಿಲ್ಲಿಸಿ

Update: 2017-06-27 10:25 GMT

ಇಡಿ ಜಗತ್ತನ್ನೇ ಮರುಳು ಮಾಡಿರುವ ಫೇಸ್‌ಬುಕ್ ನಿಮ್ಮನ್ನು ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕಿಸುತ್ತದೆ. ಅವರು ಎಲ್ಲಿದ್ದಾರೆ ಎನ್ನುವುದನ್ನು ನಿಮಗೆ ತಿಳಿಸುತ್ತದೆ. ನೀವು ಏನನ್ನು ಬೇಕಾದರೂ ಶೇರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಆದರೆ ಫೇಸಬುಕ್‌ನಲ್ಲಿ ವ್ಯವಹರಿಸುವಾಗ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಇಲ್ಲದಿದ್ದರೆ ಹ್ಯಾಕರ್‌ಗಳು, ಸ್ಟಾಕರ್‌ಗಳು ಅಥವಾ ಕಳ್ಳರಿಗೆ ನೀವು ಸುಲಭದ ತುತ್ತಾಗುತ್ತೀರಿ.

'ಆಸ್ಕ್ ಮಿ ಟೆನ್ ಥಿಂಗ್ಸ್'ಶೈಲಿಯ ಪ್ರಶ್ನಾವಳಿಯಲ್ಲಿ ಜನರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮಾಹಿತಿಗಳನ್ನು ಬಳಸಿಕೊಳ್ಳುವುದು ತನ್ನಂಥವರಿಗೆ ಸುಲಭ ಎಂದು ಅನಾಮಿಕ ಹ್ಯಾಕರ್‌ನೋರ್ವ ಹೇಳಿಕೊಂಡಿದ್ದಾನೆ. ಇಂತಹ ಮಾಹಿತಿಗಳನ್ನು ಪೋಸ್ಟ್ ಮಾಡುವ ಜನರು ಬಳಿಕ ಅತಿರೇಕ ಸಂಖ್ಯೆಯ ಫ್ರೆಂಡ್‌ಗಳನ್ನು ಟ್ಯಾಗ್ ಮಾಡುತ್ತಾರೆ. ಇವು ಹೆಚ್ಚಿನ ಸಲ ಹಲವಾರು ಜನರು ತಮ್ಮ ಪಾಸ್‌ವರ್ಡ್‌ಗಳಲ್ಲಿ ಬಳಸುವ ತಮ್ಮ ಮೂಲ ಹೆಸರು, ತಮ್ಮ ಮೊದಲ ಸಾಕುಪ್ರಾಣಿ ಅಥವಾ ತಮ್ಮ ನೆಚ್ಚಿನ ಆಲ್ಬಮ್‌ನಂತಹ ವಿವರಗಳನ್ನು ಒಳಗೊಂಡಿರುತ್ತವೆ. ಇದರಿಂದ ಕಳ್ಳರ ಕೈಗೆ ನಾವೇ ಆಯುಧವನ್ನು ನೀಡಿದಂತಾಗುತ್ತದೆ.

ನೀವು ಪೋಸ್ಟ್ ಮಾಡಬಾರದ ಕೆಲವು ಮಾಹಿತಿಗಳು ಇಲ್ಲಿವೆ.....

- ಜನ್ಮದಿನ

ನಿಮ್ಮ ಜನ್ಮದಿನ ಮಹತ್ವದ್ದಾಗಿದ್ದು, ನಿಮ್ಮ ಹೆಸರು ಮತ್ತು ವಿಳಾಸವೂ ಜೊತೆಯಲ್ಲಿರುತ್ತದೆ. ಇದು ಜನರು ನಿಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ವಿವರಗಳಿಗೆ ಲಗ್ಗೆ ಹಾಕಲು ಸುಲಭದ ಅವಕಾಶವನ್ನು ಒದಗಿಸುತ್ತದೆ.

ದೂರವಾಣಿ ಸಂಖ್ಯೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಪೋಸ್ಟ್ ಮಾಡಿದರೆ ನಿಮ್ಮನ್ನು ಸಭ್ಯರೀತಿಯಲ್ಲಿ ಮೆಚ್ಚಿಕೊಳ್ಳುವರು ದೊರೆಯಬಹುದು. ಆದರೆ ಕೆಟ್ಟದ್ದೆಂದರೆ ಸ್ಟಾಕರ್‌ಗಳು ನಿಮಗೆ ಪದೇಪದೇ ಅನಗತ್ಯ ಕರೆಗಳನ್ನು ಮಾಡಿ ಕಿರುಕುಳ ನೀಡಬಹುದು.

- ನಿಮ್ಮ ಹೆಚ್ಚಿನ 'ಫ್ರೆಂಡ್'ಗಳು

 ವ್ಯಕ್ತಿಯೋರ್ವ ಸುಮಾರು 150 ಸ್ಥಿರ ಸಂಬಂಧಗಳನ್ನು ಕಾಯ್ದುಕೊಳ್ಳಲು ಸಾಧ್ಯ ಎನ್ನುತ್ತಾರೆ ಆಕ್ಸ್‌ಫರ್ಡ್ ವಿವಿಯ ಮನೋಶಾಸ್ತ್ರ ಪ್ರೊಫೆಸರ್ ರಾಬಿನ್ ಡನ್ಬರ್. 3375 ಫೇಸ್‌ಬುಕ್ ಬಳಕೆದಾರರ ಬಗ್ಗೆ ಅಧ್ಯಯನ ನಡೆಸಿದ ರಾಬಿನ್ ಈ ಬಳಕೆದಾರರ ಫ್ರೆಂಡ್‌ಗಳ ಪೈಕಿ ಕೆಲವರನ್ನು ಮಾತ್ರ ನೆಚ್ಚಿಕೊಳ್ಳಬಹುದಾಗಿದೆ ಮತ್ತು ಉಳಿದವರು ಕೇವಲ ನಾಮ್ ಕೇ ವಾಸ್ತೆ ಆಗಿರುತ್ತಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಗ್ಯಪೂರ್ಣ ಸಂವಾದಕ್ಕಾಗಿ ಇಂತಹ ಅನಗತ್ಯ ಫ್ರೆಂಡ್‌ಗಳನ್ನು ನಿಮ್ಮ ಪಟ್ಟಿಯಿಂದ ತೆಗೆದುಹಾಕುವುದು ಒಳ್ಳೆಯದು ಎನ್ನುತ್ತಾರೆ.

- ನಿಮ್ಮ ಮಗು/ಕುಟುಂಬ ಸದಸ್ಯರ ಭಾವಚಿತ್ರ

ನಿಮ್ಮ ಮಕ್ಕಳು ಅಥವಾ ಕುಟುಂಬದ ಯುವಸದಸ್ಯರ ಭಾವಚಿತ್ರಗಳನ್ನು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಬೇಡಿ ಎನ್ನುತ್ತಾರೆ ಆಕ್ಸ್‌ಫರ್ಡ್ ಇಂಟರ್ನೆಟ್ ಇನ್‌ಸ್ಟಿಟ್ಯೂಟ್‌ನ ಪ್ರಭಾರ ನಿರ್ದೇಶಕಿ ವಿಕ್ಟೋರಿಯಾ ನ್ಯಾಷ್. ಅಲ್ಲದೆ ಅವರು ಎಲ್ಲಿ, ಯಾವ ಶಾಲೆಗಳಲ್ಲಿ ಓದುತ್ತಾರೆ ಎಂಬ ಮಾಹಿತಿಯನ್ನೂ ಬಹಿರಂಗಗೊಳಿಸಬೇಡಿ. ದುಷ್ಕರ್ಮಿಗಳು ಇಂತಹ ಮಾಹಿತಿಗಳನ್ನು ದುರುಪಯೋಗಿಸಿಕೊಳ್ಳುವ ಅಪಾಯಗಳಿವೆ ಎನ್ನುತ್ತಾರೆ ಅವರು.

- ಲೊಕೇಷನ್ ಸರ್ವಿಸಿಸ್

ಲೊಕೇಷನ್ ಸರ್ವಿಸಿಸ್ ಕೇವಲ ಆಂಡ್ರಾಯ್ಡಾ ಮತ್ತು ಐಫೋನ್‌ಗಳಲ್ಲಿ ಲಭ್ಯವಿದೆ.

500 ಮಿಲಿಯನ್‌ಗೂ ಅಧಿಕ ಬಳಕೆದಾರರು ತಮ್ಮ ಮೊಬೈಲ್‌ಗಳ ಮೂಲಕವೇ ಫೇಸ್‌ಬುಕ್ ಪ್ರವೇಶಿಸಿದ್ದರು ಎಂದು ಟೆಕ್‌ಕ್ರಂಚ್ 2015ರಲ್ಲಿ ವರದಿ ಮಾಡಿತ್ತು. ಇದರರ್ಥ ಅದೇ ನಂಬರ್ ಅವರ ಇರುವಿಕೆಯ ತಾಣವನ್ನು ಪ್ರಸಾರಗೊಳಿಸುವ ಸಾಮರ್ಥ್ಯ ಹೊಂದಿದೆ ಮತ್ತು ನಿಮಗೆ ಹಾನಿಯನ್ನುಂಟು ಮಾಡಲು ಬಯಸುವ ಅಥವಾ ಬಯಸದ ಯಾವುದೇ ವ್ಯಕ್ತಿ ನೀವು ಎಲ್ಲಿದ್ದೀರೆಂದು ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ನಿಮ್ಮ ಲೊಕೇಷನ್ ಟ್ಯಾಗ್ ಮಾಡುವುದನ್ನು ನಿಲ್ಲಿಸಿ.

- ರಜಾಕಾಲದ ಪ್ರವಾಸ

ಹಣಕಾಸು ಜಾಲತಾಣ 'ದಿಸ್ ಈಸ್ ಮನಿ' ವರದಿ ಮಾಡಿರುವಂತೆ ಯಾವುದೇ ವ್ಯಕ್ತಿ ತನ್ನ ರಜಾದಿನಗಳ ಪ್ರವಾಸ ಯೋಜನೆಯನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರೆ ಅಂತ ವ್ಯಕ್ತಿ ಪ್ರವಾಸದಲ್ಲಿದ್ದಾಗ ಆತನ ಸೊತ್ತುಗಳ ಕಳ್ಳತನವಾದರೆ ಅದರ ವಿರುದ್ಧ ವಿಮೆ ರಕ್ಷಣೆಯನ್ನು ಹೊಂದಿದ್ದರೂ ಆತನಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಹೀಗಾಗಿ ಇಂತಹ ಮಾಹಿತಿಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಜಗಜ್ಜಾಹೀರು ಮಾಡುವುದು ಸೂಕ್ತವಲ್ಲ.

- ಬೋರ್ಡಿಂಗ್ ಪಾಸ್‌ನ ಚಿತ್ರಗಳು

ಬೋರ್ಡಿಂಗ್ ಪಾಸ್‌ಗಳ ಮೇಲಿನ ಬಾರ್‌ಕೋಡ್ ನಿಮಗೆ ಮಾತ್ರ ಮೀಸಲಾಗಿದೆ. ಹೀಗಾಗಿ ಅದರ ಚಿತ್ರಗಳನ್ನು ಹಾಕಿದರೆ ವಂಚಕರು ನೀವು ವಿಮಾನಯಾನ ಕಂಪನಿಗೆ ನೀಡಿರುವ ಮಾಹಿತಿಗಳನ್ನು ಪತ್ತೆ ಹಚ್ಚಲು ಅದನ್ನು ಬಳಸಬಹುದು.

- ನಿಮ್ಮ ರಿಲೇಷನ್‌ಶಿಪ್ ಸ್ಟೇಟಸ್

ನೀವು ಹೊಸ ಸಂಬಂಧವೊಂದನ್ನು ಬೆಳೆಸಿಕೊಂಡಿರುವ ಸಂಭ್ರಮವನ್ನು ಹಂಚಿಕೊಳ್ಳಲು ಬಯಸುತ್ತೀರಾದರೆ ಅದನ್ನು ಫೇಸ್‌ಬುಕ್‌ನಲ್ಲಿ ಮಾಡಬೇಡಿ. ಅದರಿಂದ ಯಾವುದೇ ಉಪಯೋಗವಾಗದಿರಬಹುದು.

- ಕ್ರೆಡಿಟ್ ಕಾರ್ಡ್ ವಿವರಗಳು

ಇವುಗಳನ್ನಂತೂ ಯಾವುದೇ ಕಾರಣಕ್ಕೂ ಫೇಸ್‌ಬುಕ್‌ಗೆ ಪೋಸ್ಟ್ ಮಾಡಲೇಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News