×
Ad

ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಮುಜುಗರ ತಪ್ಪಿಸಿದ ದೋವಲ್: ಆಗಿದ್ದೇನು?

Update: 2017-06-27 23:38 IST

ವಾಷಿಂಗ್ಟನ್,ಜೂ.27: ಶ್ವೇತಭವನದಲ್ಲಿ ಸುದ್ದಿಗೋಷ್ಠಿಯ ಸಂದರ್ಭ ಮಾಧ್ಯಮ ಪ್ರತಿನಿಧಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಿದ್ಧಪಡಿಸಿಕೊಂಡಿದ್ದ ಹೇಳಿಕೆಗಳ ಕೆಲವು ಪುಟಗಳು ಗಾಳಿಯಿಂದ ಹಾರಿಹೋಗಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಸಮಯಪ್ರಜ್ಞೆಯಿಂದಾಗಿ ಸಂಭಾವ್ಯ ಮುಜುಗರದಿಂದ ಮೋದಿ ಪಾರಾಗಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಪ್ರಪ್ರಥಮ ಮಾತುಕತೆಗಳ ಬಳಿಕ ಅಧ್ಯಕ್ಷೀಯ ನಿವಾಸದ ರೋಸ್ ಗಾರ್ಡನ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ಏರ್ಪಾಡಾಗಿತ್ತು. ಮೋದಿಯವರು ಟ್ರಂಪ್ ಅವರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಿದ್ದರು. ಇದೇ ವೇಳೆ ಏಕಾಏಕಿಯಾಗಿ ಬೀಸಿದ ಗಾಳಿಯಿಂದಾಗಿ ಮೋದಿಯವರು ಪತ್ರಕರ್ತರಿಗಾಗಿ ಸಿದ್ಧವಾಗಿಟ್ಟುಕೊಂಡಿದ್ದ ಹೇಳಿಕೆಗಳ ಕೆಲವು ಪುಟಗಳು ಹಾರಿಹೋಗಿದ್ದವು. ಇತರ ಕೆಲವು ಹಿರಿಯ ಭಾರತೀಯ ಅಧಿಕಾರಿಗಳ ಜೊತೆ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ದೋವಲ್ ತಕ್ಷಣ ಎದ್ದು ಆ ಪುಟಗಳನ್ನೆಲ್ಲ ಒಟ್ಟುಗೂಡಿಸಿ ಮೋದಿಯವರಿಗೆ ಒಪ್ಪಿಸಿದರು. ಆದರೆ ಗಾಳಿ ಮತ್ತೊಮ್ಮೆ ತುಂಟತನ ಮೆರೆದಾಗ ಮತ್ತೆ ಆ ಕಾಗದಗಳು ಹಾರಿದ್ದು, ಆಗಲೂ ದೋವಲ್ ಅವರೇ ಅವುಗಳನ್ನು ಹೆಕ್ಕಿ ಮೋದಿಯವರಿಗೆ ಮರಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News