×
Ad

ವೀಡಿಯೊ ಗೇಮ್ ಏಕಾಗ್ರತೆಯನ್ನು ಹೆಚ್ಚಿಸಬಲ್ಲುದು...ಗೊತ್ತೇ

Update: 2017-06-28 16:09 IST

ನಿಮ್ಮ ಮಗು ವೀಡಿಯೊ ಗೇಮ್‌ಗಳನ್ನು ಆಡುವುದನ್ನು ಇಷ್ಟಪಡುತ್ತದೆಯೇ? ಆಡಲಿ ಬಿಡಿ, ಅದು ಏಕಾಗ್ರತೆ ಹೊಂದಲು ಮತ್ತು ಚೌಕ,ತ್ರಿಕೋನ,ಘನ ಅಥವಾ ಪಿರಾಮಿಡ್ ಇತ್ಯಾದಿಗಳನ್ನು ಗುರುತಿಸಲು ನಮ್ಮನ್ನು ಸಮರ್ಥರನ್ನಾಗಿಸುವ ದೃಶ್ಯ ಸ್ಥಾನಸಂಬಂಧಿ ಕೌಶಲ್ಯಗಳಿಗೆ ಹೊಣೆಯಾಗಿರುವ ಮಿದುಳಿನ ಭಾಗದ ಗಾತ್ರವನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ಇದಕ್ಕಾಗಿ ವಿಜ್ಞಾನಿಗಳು 100ಕ್ಕೂ ಅಧಿಕ ವೈಜ್ಞಾನಿಕ ಅಧ್ಯಯನಗಳನ್ನು ವಿಶ್ಲೇಷಣೆಗೊಳಪಡಿಸಿದ್ದರು.

ವೀಡಿಯೊ ಗೇಮ್ ಆಡುವವರ ನಿರಂತರ ಏಕಾಗ್ರತೆ ಅಥವಾ ಆಯ್ದ ಏಕಾಗ್ರತೆ ಯಂತಹ ಹಲವಾರು ವಿಧಗಳ ಏಕಾಗ್ರತೆಯಲ್ಲಿ ಸುಧಾರಣೆಯಾಗಿರುವುದನ್ನು ಸ್ಪೇನ್‌ನ ಯೂನಿವರ್ಸಿಟಾಟ್ ಒಬೆರ್ಟಾ ಡಿ ಕ್ಯಾಟಾಲುನ್ಯಾದ ಮಾರ್ಕ್ ಪಾಲಸ್ ನೇತೃತ್ವದ ಸಂಶೋಧನಾ ತಂಡವು ಕಂಡುಕೊಂಡಿದೆ.

 ವೀಡಿಯೊ ಗೇಮ್‌ಗಳನ್ನು ಆಡುವವರಲ್ಲಿ ಏಕಾಗ್ರತೆಗೆ ಸಂಬಂಧಿಸಿದ ಮಿದುಳಿನ ಭಾಗಗಳು ಹೆಚ್ಚು ಸಮರ್ಥವಾಗಿರುವದು ಮತ್ತು ಕೆಲವೊಂದು ಕಾರ್ಯಗಳು ಬೇಡುವ ನಿರಂತರ ಏಕಾಗ್ರತೆಗೆ ಕಡಿಮೆ ಕ್ರಿಯಾಶೀಲತೆ ಅಗತ್ಯವಾಗುತ್ತದೆ.

ದೀರ್ಘಾವಧಿಗೆ ವೀಡಿಯೊ ಗೇಮ್ ಆಡುವವರಲ್ಲಿ ಮಿದುಳಿನ ಬಲ ಹಿಪ್ಪೊಕ್ಯಾಂಪಸ್ ಗಾತ್ರದಲ್ಲಿ ಹಿರಿದಾಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಫ್ರಾಂಟಿಯರ್ಸ್ ಇನ್ ಹ್ಯೂಮನ್ ನ್ಯೂರೊಸೈನ್ಸ್ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿಯು ಪ್ರಕಟಗೊಂಡಿದೆ.

ವೀಡಿಯೊ ಗೇಮ್ ವೀಕ್ಷಣೆಯಿಂದ ವ್ಯತಿರಿಕ್ತ ಪರಿಣಾಮಗಳೂ ಇವೆ. ಈ ಆಟವು ಚಟವಾಗಬಹುದು ಮತ್ತು ಬೊಜ್ಜು,ದುರ್ಬಲ ದೃಷ್ಟಿ ಮತ್ತು ಭಾವನಾತ್ಮಕ ಸಮಸ್ಯೆಗಳಂತಹ ತೊಂದರೆಗಳನ್ನುಂಟು ಮಾಡಬಲ್ಲ ‘ಇಂಟರ್ನೆಟ್ ಗೇಮಿಂಗ್ ಡಿಸಾರ್ಡರ್’ಗೆ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News