ಆಸ್ಟ್ರೇಲಿಯ ಪ್ರವಾಸ; ಆಫ್ರಿಕ ‘ಎ’ ತಂಡಕ್ಕೆ ಮಿಲ್ಲರ್, ಪಾರ್ನೆಲ್

Update: 2017-06-28 18:30 GMT

ಜೋಹಾನ್ಸ್‌ಬರ್ಗ್, ಜೂ.28: ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕದ ಡೇವಿಡ್ ವಾರ್ನರ್, ವೇಯ್ನಿ ಪಾರ್ನೆಲ್, ಡ್ವೇಯ್ನಿ ಪ್ರಿಟೋರಿಯಸ್ ಅವರು ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಡೇವಿಡ್ ವಾರ್ನರ್, ವೇಯ್ನ ಪಾರ್ನೆಲ್, ಡ್ವೇಯ್ನ ಪ್ರಿಟೋರಿಯಸ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ತಂಡದ ಸದಸ್ಯರಾಗಿದ್ದಾರೆ.

ಟೆವುನಿಸ್ ಡೆ ಬ್ರೂನ್, ತೆಂಬಾ ಬವುಮಾ ಮತ್ತು ಡುಯಾನ್ನೆ ಆಲಿವರ್ ಇವರ ಬದಲಿಗೆ ಮೂವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಾಲ್ಕು ದಿನಗಳ ಎರಡು ಪಂದ್ಯಗಳಲ್ಲಿ ಅವರು ಆಡಲಿದ್ದಾರೆ.

29ರ ಹರೆಯದ ರಮೇಲಾ ಮತ್ತು 22ರ ಹರೆಯದ ಸ್ಪಿನ್ ಆಲ್‌ರೌಂಡರ್ ಬಿಜ್ರೊನ್ ಫೋರ್ಟುಯಿನರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News