×
Ad

IND Vs SA T20 | ಸೋತಾಫ್ರಿಕಾ, ಭಾರತಕ್ಕೆ ಸರಣಿ ಜಯ

ಕ್ವಿಂಟನ್ ಡಿಕಾಕ್ ಅಬ್ಬರ ವ್ಯರ್ಥ, ವರುಣ್ ಚಕ್ರವರ್ತಿಗೆ 4 ವಿಕೆಟ್

Update: 2025-12-19 23:00 IST

Photo Credit : BCCI

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು 30 ರನ್ ಗಳಿಂದ ಜಯಗಳಿಸುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿದೆ. ಆ ಮೂಲಕ 3-1 ಅಂಕಗಳಿಂದ ಸರಣಿ ತನ್ನದಾಗಿಸಿಕೊಂಡಿದೆ.

ಭಾರತ ತಂಡವು ನೀಡಿದ 231 ರನ್ ಗಳ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ತಂಡದ ಪರ ಅಬ್ಬರಿಸಿದ ಕ್ವಿಂಟನ್ ಡಿಕಾಕ್, ಶ್ರಮ ವ್ಯರ್ಥವಾಯಿತು.

ಭಾರತದ ಪರ ವರುಣ್ ಚಕ್ರವರ್ತಿ 4 ವಿಕೆಟ್ ಪಡೆದು ಮಿಂಚಿದರು. ಬುಮ್ರಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಹರಿಣಗಳ ಬೆವರಿಳಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News