ರೀಫಿಲ್ ಮಾಡಲ್ಪಟ್ಟ ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ ಟಾಯ್ಲೆಟ್ ಸೀಟ್ ಗಿಂತಲೂ ಅಧಿಕ ಬ್ಯಾಕ್ಟೀರಿಯಾ

Update: 2017-06-29 07:12 GMT

ಹೊಸದಿಲ್ಲಿ, ಜೂ. 29: ನಮ್ಮ ದೇಹಕ್ಕೆ ನೀರು ಬಹಳ ಅಗತ್ಯವಿರುವುದರಿಂದ ಆದಷ್ಟು ನೀರು ಕುಡಿಯಬೇಕೆಂಬುದು ವೈದ್ಯರು ಮತ್ತು ಆರೋಗ್ಯ ತಜ್ಞರು ನೀಡುವ ಸಲಹೆ. ಆದರೆ ಚೆನ್ನಾಗಿ ನೀರು ಕುಡಿಯಬೇಕೆಂಬ ತವಕದಲ್ಲಿ ಒಮ್ಮೆ ಬಳಸಲ್ಪಟ್ಟ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮತ್ತೆ ನೀರು ತುಂಬಿಸಿದಲ್ಲಿ ಅದು ಹಾನಿಕಾರಕ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತವಾರಣ ಸೃಷ್ಟಿಸುವುದಲ್ಲದೆ ಈ ಬ್ಯಾಕ್ಟೀರಿಯಾ ಬಾಟಲಿಯಲ್ಲಿ ತುಂಬಿಸಿಟ್ಟ ನೀರಿನಲ್ಲಿ ಸೇರಿಕೊಂಡು ಅದನ್ನು ಸೇವಿಸಿದವರಿಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದೆಂದು ಟ್ರೆಡ್ ಮಿಲ್ ರಿವೀವ್ಸ್ ನಡೆಸಿದ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಅಥ್ಲೀಟ್ ಒಬ್ಬರು ಒಮ್ಮೆ ಬಳಕೆ ಮಡಿದ ಪ್ಲಾಸ್ಟಿಕ್ ಬಾಟಲಿಯನ್ನು ಮತ್ತೆ ಒಂದು ವಾರ ನೀರು ತುಂಬಿಸಿ ಉಪಯೋಗಿಸಿದಾಗ ಅದರಲ್ಲಿ 9 ಲಕ್ಷ ಬ್ಯಾಕ್ಟೀರಿಯಲ್ ಕಾಲೊನಿಗಳು ಪತ್ತೆಯಾಗಿದ್ದವು. ಅಚ್ಚರಿಯೆಂದರೆ ನಮ್ಮ ಟಾಯ್ಲೆಟ್ ಸೀಟ್ ನಲ್ಲಿರುವ ಬ್ಯಾಕ್ಟೀರಿಯಾಗಿಂತಲೂ ಇದು ಅಧಿಕವಾಗಿದೆ. ಹೀಗೆ ಬಾಟಲಿಯಲ್ಲಿರುವ ಶೇ 60ರಷ್ಟು ಕ್ರಿಮಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನೊಡ್ಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಪ್ಲಾಸ್ಟಿಕ್ ಬಾಟಲಿ ತಯಾರಿಕೆಗೆ ಬಿಪಿಎ (ಬಿಸ್ಫಿನಾಲ್) ಎಂಬ ರಾಸಾಯನಿಕ ಉಪಯೋಗಿಸಿ ಅದನ್ನು ಮೃದುಗೊಳಿಸಿ ದೀರ್ಘ ಬಾಳಿಕೆಗೊಳಿಸಲಾಗುತ್ತದೆ. ಆದರೆ ಇದು ನೀರಿನೊಂದಿಗೆ ಮಿಶ್ರವಾಗಿ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯಿಂದಾಗಿ ದೇಹದ ಸೆಕ್ಸ್ ಹಾರ್ಮೋನುಗಳೂ ಬಾಧಿತವಾಗಬಹುದೆನ್ನಲಾಗಿದೆ.

ಈ ಬಿಪಿಎ ಎಂಬ ರಾಸಾಯನಿಕ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮುಂತಾದವುಗಳ ಅಪಾಯವೊಡ್ಡುತ್ತದೆ, ದೇಹದ ಎಂಡೋಕ್ರಿನ್ ವ್ಯವಸ್ಥೆಯನ್ನು ಹಾನಿಗೊಳಿಸಿ ಹಾರ್ಮೋನುಗಳ ಅಸಮತೋಲನಕ್ಕೂ ಕಾರಣವಾಗಬಹುದು ಎನ್ನುತ್ತದೆ ಈ ಅಧ್ಯಯನ.

ನಾವೇನು ಮಾಡಬಹುದು ? ಒಮ್ಮೆ ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಮತ್ತೆ ಬಳಸಬಾರದು ಅಥವಾ ಬಿಪಿಎ ಮುಕ್ತ ಬಾಟಲಿಗಳನ್ನು ಖರೀದಿಸಬಹುದು. ಗ್ಲಾಸ್ ಅಥವಾ ಸ್ಟೀಲ್ ಬಾಟಲಿಗಳನ್ನು ಉಪಯೋಗಿಸುವಂತೆಯೂ ತಜ್ಞರು ಸಲಹೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News