ಮಂಗಳಗ್ರಹದಲ್ಲಿ ಅಪಹೃತ ಮಕ್ಕಳನ್ನು ಅಡಗಿಸಲಾಗಿದೆ

Update: 2017-07-01 17:44 GMT

ನ್ಯೂಯಾರ್ಕ್, ಜು.1: ಮಂಗಳ ಗ್ರಹದಲ್ಲಿ ಅಪಹರಣಕ್ಕೊಳಗಾದ ಮಕ್ಕಳಿಂದಲೇ ತುಂಬಿರುವ ಒಂದು ಕಾಲನಿ ಇದೆ .ಈ ಮಕ್ಕಳನ್ನು 20 ವರ್ಷದ ಅಂತರಿಕ್ಷ ಯಾತ್ರೆಗೆ ಕಳಿಸಲಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ - ಹೀಗೆಂದವರು ಅಮೆರಿಕದ ಎನ್‌ಬಿಸಿ (ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ) ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ರಾಬರ್ಟ್ ಡೇವಿಡ್ ಸ್ಟೀಲ್ ಎಂಬವರು.

   ಅಲೆಕ್ಸ್ ಜೋನ್ಸ್ ನಿರೂಪಕರಾಗಿದ್ದ ‘ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತ ಮಕ್ಕಳು’ ಎಂಬ ವಿಷಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಬರ್ಟ್ ಸ್ಟೀಲ್ , ಒಮ್ಮೆ ಈ ಮಕ್ಕಳು ಮಂಗಳನೆಡೆಗೆ ರವಾನಿಸಲ್ಪಟ್ಟರೆ ಬಳಿಕ ಅಲ್ಲಿ ಗುಲಾಮರಂತೆ ಬಾಳುವುದು ಬಿಟ್ಟರೆ ಬೇರೆ ಅವಕಾಶವಿಲ್ಲ ಎಂದಿದ್ದಾರೆ. ಅಲ್ಲಿ ಶಿಶುಕಾಮಿಗಳು ಈ ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ ಬಳಿಕ ಕೊಲ್ಲುತ್ತಾರೆ. ಬಳಿಕ ದೇಹದ ಭಾಗಗಳನ್ನು ಕಟಾವು ಮಾಡುತ್ತಾರೆ ಎಂದು ಹೇಳಿದ್ದಾರೆ.

ಸ್ಟೀಲ್ ಅವರ ಹೇಳಿಕೆಗೆ ಅಮೆರಿಕದ ಅಂತರಿಕ್ಷ ಯಾನ ಸಂಸ್ಥೆ ‘ನಾಸ’ದ ಮಂಗಳಯಾನ ಯೋಜನೆಯ ವಕ್ತಾರ ಗಯ್ ವೆಬ್‌ಸ್ಟರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಗಳನಲ್ಲಿ ಮನುಷ್ಯರಿಲ್ಲ ಎಂದಿರುವ ವೆಬ್‌ಸ್ಟರ್, ಮಂಗಳನಲ್ಲಿ ಸಕ್ರಿಯ ಸಂಚಾರಿಗಳಿದ್ದಾರೆ. ಆದರೆ ಮನುಷ್ಯರು ಖಂಡಿತಾ ಇಲ್ಲ ಎಂದು ಹೇಳಿದ್ದಾರೆ. ಜೋನ್ಸ್ ಅವರು ಪ್ರಸ್ತುತ ಪಡಿಸುವ ರೇಡಿಯೋ ಕಾರ್ಯಕ್ರಮ ಜನಪ್ರಿಯವಾಗಿದ್ದು ದೇಶದಾದ್ಯಂತ 118 ರೇಡಿಯೋ ನಿಲಯಗಳಿಂದ ಪ್ರಸಾರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News