ಪ್ರಧಾನಿ ಖಂಡನಾ ಹೇಳಿಕೆ ನೀಡಿದ್ದು ತಡವಾಯಿತು: ಶತ್ರುಘ್ನ ಸಿನ್ಹಾ
ಹೊಸದಿಲ್ಲಿ,ಜು.1: ಗೋರಕ್ಷಕರಿಂದ ದೇಶಾದ್ಯಂತ ನಡೆದ ಕೊಲೆಕೃತ್ಯಗಳನ್ನು ಟೀಕಿಸಿ ಬಿಜೆಪಿ ಸಂಸದ ಶತ್ರುಘ್ನಸಿನ್ಹಾ ಹೇಳಿಕೆ ನೀಡಿದ್ದಾರೆ. ಗೋವಿನ ಹೆಸರಲ್ಲಿ ನಡೆಯುವ ಕೊಲೆಕೃತ್ಯಗಳನ್ನು ಖಂಡಿಸಿದ್ದು ವಿಳಂಬವಾಯಿತು. ಇದರ ವಿರುದ್ಧ ಬಲವಾದ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಮೋದಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿ ಸಿನ್ಹಾ ಹೇಳಿದರು.
ಗೋವಿನ ಹೆಸರಿನಲ್ಲಿ ದೇಶದಲ್ಲಿ ನಡೆಯುವ ಕೊಲೆಕೃತ್ಯದಲ್ಲಿ ಪೊಲೀಸರು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿಸಿದ್ದನ್ನು ಬಲವಾಗಿ ಖಂಡಿಸುತ್ತೇನೆ. ಇಂತಹ ಕೊಲೆಕೃತ್ಯಗಳು ದೇಶವಿಡೀ ಹರಡಿಕೊಂಡಿದೆ. ತಕ್ಷಣ ಕ್ರಮ ಜರಗಿಸದಿದ್ದರೆ ನಾವು ಏನು ಆಹಾರ ಸೇವಿಸಬೇಕು ಮತ್ತು ಯಾವ ವಸ್ತ್ರವನ್ನು ಧರಿಸಬೇಕೆನ್ನುವುದನ್ನು ಅಕ್ರಮಿಗಳ ಗುಂಪು ತೀರ್ಮಾನಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಿನ್ಹಾ ಹೇಳಿದರು.
ನಾವೆಲ್ಲರೂ ಭಾರತೀಯರು, ಅದರ ನಂತರವೇ ಹಿಂದೂ, ಮುಸ್ಲಿಂ. ಈದ್ ಹಬ್ಬದ ಹಿಂದಿನ ದಿವಸ ಕೊಲ್ಲಲ್ಪಟ್ಟ ಜುನೈದ್ ಭಾರತೀಯನೇ. ನಾವು ಏನು ತಿನ್ನಬೇಕು,ಹೇಗೆ ಇರಬೇಕೆನ್ನುವುದನ್ನು ಯಾರು ತೀರ್ಮಾನಿಸಬೇಕೆಂದು ಸಿನ್ಹಾ ಪ್ರಶ್ನಿಸಿದರು. ಚೀನಾ ಹೆಚ್ಚುಬಲಿಷ್ಠವಾಗುತ್ತಿದೆ. ಪಾಕಿಸ್ತಾನ ಹೆಚ್ಚೆಚ್ಚುಭಾರತೀಯ ಸೈನಿಕರನ್ನು ಕೊಲ್ಲುತ್ತಿದೆ. ಮಕ್ಕಳುಮತ್ತು ಮಹಿಳೆಯರ ವಿರುದ್ಧ ಆಕ್ರಮಗಳು ಹೆಚ್ಚುತ್ತಿವೆ. ಈಪರಿಸ್ಥಿತಿಯಲ್ಲಿ ಆಹಾರದ ಕುರಿತು ನಾವು ಯೋಚಿಸುತ್ತಿದ್ದೇವೆ ಎಂದಿರುವ ಸಿನ್ಹಾ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿದ ಕೇಂದ್ರ ಸಚಿವರನ್ನು ಕೂಡಾ ಸಿನ್ಹಾ ಟೀಕಿಸಿದರು.
ದನವನ್ನು ಮೊದಲು ಹಸಿವು ಮತ್ತು ಇತರ ಸಮಸ್ಯೆಗಳಿಂದ ಸಂರಕ್ಷಿಸಬೇಕಾಗಿದೆ. ಇದು ಕಾನೂನುಗಳು ಬಲಿಷ್ಠವಾಗಬೇಕಾದ ಸಮಯವಾಗಿದೆ. ಅಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ಜನರ ಗುಂಪಿನ ಆದಿಪತ್ಯವಾಗಿ ಬದಲಾದೀತು ಎಂದು ಸಿನ್ಹಾ ಎಚ್ಚರಿಸಿದ್ದಾರೆ