ಟಾಟಾ, ಅದಾನಿ, ಎಸ್ಸಾರ್‌ಗಳು ಸೊತ್ತುಗಳ ಮೌಲ್ಯ ಕಡಿತದಿಂದ ಕಂಗಾಲು
ಗುಜರಾತ್‌ನಲ್ಲಿರುವ ತಮ್ಮ ವಿದ್ಯುತ್‌ಸ್ಥಾವರಗಳಲ್ಲಿ ಆಗಿರುವ ಭಾರೀ ನಷ್ಟಗಳಿಂದ ಅದಾನಿ, ಟಾಟಾ ಮತ್ತು ಎಸ್ಸಾರ್ ಕಂಪೆನಿಗಳು ಕಂಗಾಲಾಗಿದೆ. ಅವುಗಳ ಆಸ್ತಿ (ಅಸೆಟ್ಸ್)ಗಳ ವೌಲ್ಯದಲ್ಲಿ ತೀರ ಕಡಿತವಾಗಿ, ಆಸ್ತಿಗಳ ವೌಲ್ಯ ಇಳಿದು ಹೋಗಿ ಅವುಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಇತ್ತೀಚೆಗೆ ಇಂಡೋನೇಶ್ಯಾ ತನ್ನ ಕಾನೂನಿನಲ್ಲಿ ಬದಲಾವಣೆ ಮಾಡಿದ್ದರ ಪರಿಣಾಮವಾಗಿ ಈ ಕಂಪೆನಿಗಳಿಗೆ ಕಲ್ಲಿದ್ದಲು ಆಮದು ತುಂಬ ದುಬಾರಿಯಾಯಿತು. ಆದ್ದರಿಂದ ಈ ಕಂಪೆನಿಗಳು ನಡೆಸುತ್ತಿದ್ದ ಅನೇಕ ವಿದ್ಯುತ್ ಯೋಜನೆಗಳು ಯಶಸ್ವಿಯಾಗಿ ನಡೆಯುವುದು ಕಷ್ಟವಾಗಿದೆ. ಪರಿಣಾಮವಾಗಿ, ಕಂಪೆನಿಗಳಿಗೆ ಸಾಲ ನೀಡಿರುವ ಬ್ಯಾಂಕ್‌ಗಳನ್ನು ಲಾಭದಾಯಕವಾಗಿ ನಡೆಯದ ಆಸ್ತಿಗಳು (ನಾನ್-ಪರ್ಮಾರ್ಮಿಂಗ್ ಅಸೆಟ್ಸ್-ಎನ್ ಪಿ ಎ) ಎಂಬ ಮುಂದಿನ ಅಲೆ, (ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ) ವಿದ್ಯುತ್/ಇಂಧನ ರಂಗದಿಂದ ಬರಬಹುದೆಂದು ಭಯ ಕಾಡತೊಡಗಿದೆ.
ವಿಶೇಷ ಉದ್ದೇಶದ ವಾಹನದ ಕೋಸ್ಟಲ್ ಗುಜರಾತ್ ಪವರ್ ಎಂಬ ಟಾಟಾ ಪವರ್ಸ್‌ನ ಮುಂದ್ರಾ ಯೋಜನೆಯಲ್ಲಿ ಕಂಪೆನಿಯು ಸುಮಾರು 18,000 ಕೋಟಿ ರೂ.ಯಷ್ಟು ಬಂಡವಾಳ ಹೂಡಿದೆ. ಈವರೆಗೆ ಈ ಯೋಜನೆಯಿಂದ ಋಣಾತ್ಮಕ (ನೆಗೆಟಿವ್) ಆದಾಯವಷ್ಟೆ ಬಂದಿದೆ.
ಅದಾನಿ ಪವರ್ ಕಂಪೆನಿಯ ಒಟ್ಟು ವೌಲ್ಯ 3,000 ಕೋಟಿ ರೂ. ಮತ್ತು ಅದರ ದಾಖಲೆಗಳಲ್ಲಿ 49,230 ಕೋಟಿ ರೂ. ಸಾಲ ಅಂತ ಇದೆ.
ಬ್ಯಾಂಕ್‌ಗಳಲ್ಲಿ ಹೇಳುವಂತೆ, ಎಸ್ಸಾರ್ ಪವರ್ ಕಂಪೆನಿ ಸಲಾಯ ಸ್ಥಾವರದಲ್ಲಿ 2,600 ಕೋಟಿ ರೂ. ಹೂಡಿತ್ತು ಮತ್ತು ಅದಕ್ಕೆ 5,000 ಕೋಟಿ ರೂ. ಸಾಲ ಇತ್ತು.
ಬಹಳ ಸಮಯದಿಂದ ಟಾಟಾ ಪವರ್ ಕಂಪೆನಿ ತನ್ನ ಮುಂದ್ರಾ ಯೋಜನೆ ಯೊಂದಿಗೆ ಹೆಣಗಾಡುತ್ತಿದೆ ಮತ್ತು ಅದು ತನಗೆ ಸಾಲ ನೀಡಿದವರೊಂದಿಗೆ ಚರ್ಚಿಸಿ, ತಾನು ಈ ಪರಿಸ್ಥಿತಿಯನ್ನು ನಿಭಾಯಿಸಲು ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದೇನೆಂದು ಈಗಾಗಲೇ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಅದರಿಂದ ವಿದ್ಯುತ್ ಖರೀದಿಸುವವರು ಹೂಡಿರುವ ಷೇರುಗಳ ಒಂದು ಬಹುದೊಡ್ಡ ಭಾಗವನ್ನು ತನ್ನ ವಶಕ್ಕೆ ಪಡೆಯಬಹುದು ಎಂಬುದು ಕೂಡ ಈ ಸೂಚನೆಗಳಲ್ಲಿ ಸೇರಿದೆ. ಹೀಗೆ ನಷ್ಟದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಾಜೆಕ್ಟ್‌ಗಳ ಒಂದು ಸಭೆ ಕರೆಯಲು ಭಾರತ ಸರಕಾರಒಲವು ತೋರಿದೆ ಮತ್ತು ವಿಷಯದ ಕುರಿತು ಚರ್ಚೆ ನಡೆಯುತ್ತಿದೆ ಎಂದು ಟಾಟಾ ಪವರ್ ಕಂಪೆನಿ ಜೂನ್ 23ರಂದು ಹೇಳಿದೆ.
ಸಿಡ್ನಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಇಕನಾಮಿಕ್ಸ್ ಆ್ಯಂಡ್ ಫೈನಾನ್ಶಿಯಲ್ ಅನಾಲಿಸಿಸ್ ( ಐಇಇಎಫ್‌ಎ) ಹೇಳುವಂತೆ, ಅದಾನಿ ಪವರ್ ಕಂಪೆನಿಯು ತನ್ನ ಒಟ್ಟು ಸ್ಥಿರಾಸ್ತಿಯಲ್ಲಿ ಮುಂದ್ರಾ ಯೋಜನೆಯಲ್ಲಿ ಒಂದು ಬಿಲಿಯ ಡಾಲರ್ (ರೂ.6,500-ಕೋಟಿ) ನಷ್ಟು ವೌಲ್ಯ-ಕಡಿತವನ್ನು ಎದುರಿಸಬೇಕಾಗಿದೆ. ಅಲ್ಲದೆ ಇದರ ಜತೆಗೆ ಅದು 2016-2017ರಲ್ಲಿ ವರದಿ ಮಾಡಿದ 954 ಮಿಲಿಯ ಡಾಲರ್ ನಿವ್ವಳ ನಷ್ಟವನ್ನು ಸರಿದೂಗಿಸಬೇಕಾಗಿದೆ.
ತನ್ನ ಕಂಪೆನಿಯ ಹೂಡಿಕೆಯ ಒಂದು ಭಾಗವನ್ನು ಸರಕಾರಿ ಮಾಲಕತ್ವದ ಕಂಪೆನಿಗಳಿಗೆ ಮಾರುವ ಉದ್ದೇಶದಿಂದ ಜೂನ್ 6ರಂದು ಅದಾನಿ ಪವರ್ ಕಂಪೆನಿಯು ತನ್ನ ಮುಂದ್ರಾ ವಿದ್ಯುತ್ ಯೋಜನೆಯನ್ನು ‘ಕಡಿಮೆ ಬೆಲೆಗೆ ಮಾರಾಟ ಮಾಡುವ ‘(ಸ್ಲಂಪ್ ಸೇಲ್)’ ಪ್ರಸ್ತಾವನೆಯನ್ನು ಅನುಮೋದಿಸಿತ್ತು.
ಓರ್ವ ಬ್ಯಾಂಕ್ ಅಧಿಕಾರಿ ಹೇಳುವಂತೆ, ‘ಈ ಎಲ್ಲ (ವಿದ್ಯುತ್/ಇಂಧನ) ಪ್ರಾಜೆಕ್ಟ್‌ಗಳು ತಮ್ಮ ಸ್ಥಿರಾಸ್ತಿ (ಅಸೆಟ್ಸ್)ಗಳ ವೌಲ್ಯದಲ್ಲಿ ಆಗಿರುವ ಗಣನೀಯ ಪ್ರಮಾಣದ ಕಡಿತ (ರೈಟ್-ಡಾನ್ಸ್)ಗಳನ್ನು ಸ್ವೀಕರಿಸಲೇ ಬೇಕಾಗಿದೆ; ನಿಭಾ ಯಿಸಲೇಬೇಕಾಗಿದೆ, ಈ ಕಂಪೆನಿಗಳು ತಮ್ಮ ಬಹುಪಾಲು ಹೂಡಿಕೆ (ಸ್ಟೇಕ್ಸ್)ಗಳನ್ನು ವಿತರಣಾ ಕಂಪೆನಿಗಳಿಗೆ ಉಚಿತವೆಂದೇ ಹೇಳಬಹುದಾದ ದರದಲ್ಲಿ ನೀಡಿರುವುದರಿಂದ ಇವುಗಳ ಹಣಕಾಸು ಒತ್ತಡ ಸ್ಪಷ್ಟವಾಗಿ ಕಾಣಿಸುತ್ತದೆ’. ಉಕ್ಕುಮತ್ತು ಟೆಲಿಕಾಂ ರಂಗದ ಬಳಿಕ, ಪಾವತಿಸಲಾಗದ ಸಾಲ (ಬ್ಯಾಡ್ ಲೋನ್)ಗಳ ಮುಂದಿನ ಅಲೆ ವಿದ್ಯುತ್/ಇಂಧನ ರಂಗದಿಂದ ಬರಲಿದೆ, ಎಂದೂ ಆ ಅಧಿಕಾರಿ ಹೇಳಿದ್ದಾರೆ.
ಸೌರಶಕ್ತಿಯ ಬೆಲೆಗಳಲ್ಲಾಗುವ ಇಳಿಕೆ ಯು ಈ ಕಲ್ಲಿದ್ದಲು ಆಧಾರಿತ ವಿದ್ಯುತ್ ಪ್ರಾಜೆಕ್ಟ್‌ಗಳ ಕತ್ತನ್ನು ಇನ್ನಷ್ಟು ಹಿಸುಕಲಿದೆ ಎನ್ನುತ್ತದೆ ಐಇಇಎಫ್‌ಎ.
ತನ್ನ ಇಂಧನ (ಕಲ್ಲಿದ್ದಲು) ವೆಚ್ಚವು ತಾನು ವಿದ್ಯುತ್ತನ್ನು ಮಾರುವ ಬೆಲೆಗಿಂತ ಹೆಚ್ಚಾಗಿರುವುದರಿಂದ ತನ್ನ ಸಾಲಗಳ ಬಡ್ಡಿ ತೆರಲು ತನಗೆ ಸಾಧ್ಯವಾಗುವುದಿಲ್ಲವೆಂದು, 1,200 ಮೆಗಾವ್ಯಾಟ್ ಸ್ಥಾವರವನ್ನು ನಡೆಸುತ್ತಿ ರುವ ಎಸ್ಸಾರ್ ಪವರ್ ತನಗೆ ಸಾಲ ನೀಡಿದ ಬ್ಯಾಂಕ್‌ಗಳಿಗೆ ಈಗಾಗಲೇ ತಿಳಿಸಿದೆ.
ಇಷ್ಟರವರೆಗೆ ಅದರ ಖಾತೆಯು ಎನ್‌ಪಿಎ ಆಗಿಲ್ಲ; ಆದರೆ ಮುಂದಿನ ತ್ರೈಮಾಸಿಕ ಗಳಲ್ಲಿ ಬ್ಯಾಂಕ್‌ಗಳಿಗೆ ತಾನು ತನ್ನ ಸಾಲದ ಬಾಕಿ ಕಂತುಗಳನ್ನು ಕಟ್ಟಲು ಸಮರ್ಥನಿಲ್ಲ ಎಂದು ಅದು ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಹೇಳಿದೆ.
ಭಾರತ ಸರಕಾರವು ವಿದ್ಯುತ್ ಗ್ರೀಡ್‌ಅನ್ನು ಕಡಿಮೆ ಹೊಗೆ ಉಗುಳುವ ವಿದ್ಯುತ್ ಯೋಜನೆಗಳಿಗೆ ಬದಲಿಸ ಬೇಕೆಂಬ ತನ್ನ ಇಂಧನ ನೀತಿಗೆ ಹೆಚ್ಚು ಒತ್ತು ಕೊಡುತ್ತಿರುವು ದರಿಂದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ರಂಗವು ಭಾರತದಲ್ಲಿ ತೀರಾ ಒತ್ತಡಕ್ಕೊಳಗಾಗಿದೆ, ಎನ್ನುತ್ತದೆ ಐಇಇಎಫ್‌ಎ.
‘ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸುಮಾರು 15 ಬಿಲಿಯ ಡಾಲರ್‌ನಷ್ಟು ಬೆಲೆಬಾಳುವ ಸ್ಥಿರಾಸ್ತಿಗಳು (ಅಸೆಟ್ಸ್) ಮಾರಾಟಕ್ಕಿವೆ, ಆದರೆ ಇವುಗಳನ್ನು ಖರೀದಿ ಸುವವರಿಲ. ಮತ್ತು ಇಂಧನ (ಥರ್ಮಲ್) ವಿದ್ಯುತ್ ರಂಗ ಭಾರತದಲ್ಲಿ ಸಮಗತಿಯ (ಸಸ್ಟೈನೇಬಲ್) ಅಭಿವೃದ್ಧಿಗೆ ಒಂದು ಬಹುದೊಡ್ಡ ತಡೆಯಾಗಿ ಪರಿಣಮಿಸಿದೆ.’ ಎಂದು 2012ರಲ್ಲಿ ಬರೆದ ಒಂದು ಟಿಪ್ಪಣಿಯಲ್ಲಿ ಆಸ್ಟ್ರೇಲಿಯಾದ ಐಇಇಎಫ್‌ಎಯ ಇಂಧನ ಹಣಕಾಸಿನ ಅಧ್ಯಯನಗಳ ನಿರ್ದೇಶಕ ಟಿಮ್ ಬಕ್ಲಿ ಹೇಳಿದ್ದಾರೆ.
(ಕೃಪೆ: ಬಿಸಿನೆಸ್ ಸ್ಟಾಂಡರ್ಡ್)