ಚುನಾವಣಾ ಆಯುಕ್ತರ ನೇಮಕಕ್ಕೆ ಕಾನೂನು ತನ್ನಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ
ಹೊಸದಿಲ್ಲಿ, ಜು. 5: ಚುನಾವಣೆ ಆಯುಕ್ತರ ನೇಮಕಕ್ಕೆ ಪ್ರತ್ಯೇಕ ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಉತ್ತರಾಧಿಕಾರಿಯನ್ನಾಗಿ ಅಚಲ್ ಕುಮಾರ್ ಜ್ಯೋತಿ ಅವರನ್ನು ಕೇಂದ್ರ ಸರಕಾರದ ಆಯ್ಕೆ ಮಾಡಿದ ಬಳಿಕ ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಚುನಾವಣಾ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಸಂಸತ್ತು ಕಾನೂನು ರೂಪಿಸದೇ ಇದ್ದರೆ, ನ್ಯಾಯಾಲಯ ರೂಪಿಸಲಿದೆ ಎಂದಿದೆ.
ಸಂವಿಧಾನದ 324 ಕಲಂ ಚುನಾವಣಾ ಆಯುಕ್ತರ ಆಯ್ಕೆ ಬಗ್ಗೆ ಹೇಳುತ್ತದೆ. ಈಗಿರುವ ಕಾನೂನು ಅಡಿಯಲ್ಲಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಗತ್ತದೆ. ಆದರೆ, ಅದಕ್ಕಾಗ ಕಾನೂನು ಜಾರಿಗೊಳಿಸಿಲ್ಲ ಎಂದಿದೆ.
ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ನ್ಯಾಯಸಮ್ಮತತೆ ಹಾಗೂ ಪರಾದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅನೂಪ್ ಪರನ್ವಾಲ್ ತಮ್ಮ ನ್ಯಾಯಮೂರ್ತಿ ಪ್ರಶಾಂತ್ ಭೂಷಣ್ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಹೇಳಿದೆ.