×
Ad

ಸೋದರಿಯನ್ನೇ ಇರಿದು ಕೊಂದ ಯುವಕ

Update: 2017-07-09 23:18 IST

ಲಾಹೋರ್,ಜು.9: ಪ್ರೇಮವಿವಾಹವಾಗುವ ಮೂಲಕ ಕುಟುಂಬದ ‘ಮರ್ಯಾದೆಗೆ ಕಳಂಕ ’ತಂದಳೆಂಬ  ರೋಷದಿಂದ 25 ವರ್ಷದ ಯುವತಿಯೊಬ್ಬಳನ್ನು ಆಕೆಯ ಸಹೋದರ ಇರಿದುಕೊಂದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ರವಿವಾರ ವರದಿಯಾಗಿದೆ.

ತನ್ನ ಕುಟುಂಬದ ವಿರೋಧವನ್ನು ಲೆಕ್ಕಿಸದೆ ಯುವತಿ ಶಾಝಿಯಾ ತನ್ನ ಪ್ರಿಯಕರನಾದ ಶೇರಾಕೋಟ್‌ನ ನಿವಾಸಿಯೊಬ್ಬ ಜೊತೆ ಕಳೆದ ಪಲಾಯನ ಮಾಡಿದ್ದಳು. ಆಕೆಯ ಸಹೋದರ ಮುಹಮ್ಮದ್ ಇಶ್ಲಾಕ್, ತನ್ನ ಸೋದರಿಯನ್ನು ಅಪಹರಿಸಲಾಗಿದೆಯೆಂದು ದೂರು ನೀಡಿದ್ದ. ಆದರೆ ಶಾಝಿಯಾ ಮನೆಗೆ ವಾಪಾಸಾದ ಬಳಿಕ ಉಭಯ ತಂಡಗಳೂ ದುರು ಹಿಂಪಡೆಯಲು ನಿರ್ಧರಿಸಿದ್ದವು.

 ಶನಿವಾರ ಇಶಾಕ್, ತಂಗಿ ಶಾಜಿಯಾ ಕುಟುಂಬಕ್ಕೆ ಅಪಖ್ಯಾತಿ ತಂದಿದ್ದಾಳೆಂದು ನಿಂದಿಸಿ ಆಕೆಯನ್ನು ಹಲವು ಬಾರಿ ಚೂರಿಯಿಂದ ಇರಿದು ಕೊಂದಿದ್ದಾನೆ. ಈ ಸಂದರ್ಭ ಆಕೆಯ ಹೆತ್ತವರು ಅಲ್ಲಿದ್ದರೂ, ಅವರ್ಯಾರೂ ರಕ್ಷಣೆಗೆ ಬರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

 ಪಾಕಿಸ್ತಾನದ ಗ್ರಾಮಾಂತರ ಪ್ರದೇಶಗಳಲ್ಲಿ ಕುಲಗೌರವದ ಹೆಸರಿನಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆಗೆ ಪ್ರತಿ ವರ್ಷ ಸಾವಿರಾರು ಮಹಿಳೆಯರು ಬಲಿಯಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News