×
Ad

ಪಾಕ್‌ನಿಂದ 70 ಮಂದಿ ಭಾರತೀಯ ಬೆಸ್ತರ ಬಿಡುಗಡೆ

Update: 2017-07-09 23:21 IST

ಕರಾಚಿ,ಜು.9: ತನ್ನ ಸಾಗರಪ್ರದೇಶದೊಳಗೆ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ 78 ಮಂದಿ ಬೆಸ್ತರನ್ನು ಪಾಕಿಸ್ತಾನವು ರವಿವಾರ ಬಿಡುಗಡೆಗೊಳಿಸಿದೆ.

 ಮೀನುಗಾರರನ್ನು ಕರಾಚಿಯ ಲಾಂಧಿ ಜೈಲಿನಿಂದ ಬಿಡುಗಡೆ ಗೊಳಿಸಲಾಗಿದೆಯೆಂದು ಸಿಂಧ್‌ನ ಪ್ರಾಂತೀಯ ಗೃಹ ಇಲಾಖೆಯ ಅಧಿಕಾರಿ ನಸೀಮ್ ಸಿದ್ದೀಕಿ ತಿಳಿಸಿದ್ದಾರೆ. ಬಿಡುಗಡೆಗೊಂಡ ಬೆಸ್ತರು ಸೋಮವಾರ ಭಾರತದ ಗಡಿಯನ್ನು ತಲುಪುವ ನಿರೀಕ್ಷೆಯಿದೆ.
298 ಮಂದಿ ಭಾರತೀಯ ಮೀನುಗಾರರು ಈಗಲೂ ಜೈಲಿನಲ್ಲಿದ್ದು ಭಾರತದಿಂದ ಅವರ ರಾಷ್ಟ್ರೀಯತೆಯನ್ನು ದೃಢೀಕರಿಸಿದ ಬಳಿಕ ಅವರೂ ಕೂಡಾ ಬಿಡುಗಡೆಯಾಗಲಿದ್ದಾರೆಂದು ನಸೀಮ್ ಸಿದ್ದೀಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News