ಹದಿಹರೆಯದ ಮಗಳೆದುರೇ ಬಾಲಕಿಯನ್ನು ಅತ್ಯಾಚಾರಗೈದ ತಂದೆ

Update: 2017-07-10 04:19 GMT

ಹೊಸದಿಲ್ಲಿ, ಜು. 10: ಹದಿಹರೆಯದ ಮಗಳೆದುರೇ, ಎಂಟು ವರ್ಷದ ಬಾಲಕಿಯ ಮೇಲೆ ತಂದೆ ಅತ್ಯಾಚಾರ ಎಸಗಿದ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಇನ್ನೊಂದು ಘಟನೆಯಲ್ಲಿ ಕನೋಟ್ ಪ್ಯಾಲೇಸ್ ಬಳಿ ಎಂಟು ವರ್ಷದ ಬಾಲಕಿಯನ್ನು ಆಕೆಯ ತಂದೆಯ ಸ್ನೇಹಿತ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.

ಕೇಂದ್ರ ದೆಹಲಿಯ ಕಮಲಾ ಮಾರ್ಕೆಟ್ ಬಳಿಯ ರೈಲ್ವೆ ಕಾಲನಿಯ ಜಿಮ್‌ನಲ್ಲಿ ಮಗಳೆದುರೇ ಹೀನ ಕೃತ್ಯ ಎಸಗಿದ 36 ವರ್ಷದ ವಿಧುರನನ್ನು ಬಂಧಿಸಲಾಗಿದೆ.

ಈತ ತನ್ನ ಇಬ್ಬರು ಪುತ್ರಿಯರ ಜತೆ ವಾಸವಿದ್ದ. ಶುಕ್ರವಾರ ಸಂಜೆ ಓರ್ವ ಪುತ್ರಿಯನ್ನು ಕರೆದುಕೊಂಡು ಪಾರ್ಕ್‌ಗೆ ಹೋದ. ಅಲ್ಲಿ ಪುಟ್ಟ ಬಾಲಕಿ ಆಟವಾಡುತ್ತಿದ್ದಳು. ಚಾಕಲೇಟ್ ಆಸೆ ತೋರಿಸಿ ಆಕೆಯನ್ನು ರೈಲ್ವೆ ಕಾಲನಿಯ ಜಿಮ್‌ಗೆ ಕರೆದೊಯ್ದ. ಅಲ್ಲಿ ಜಿಮ್ ಮುಚ್ಚಿತ್ತು. ಆದ್ದರಿಂದ ಹದಿಹರೆಯದ ಮಗಳ ಎದುರೇ ಮೃಗೀಯ ವರ್ತನೆ ತೋರಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕನೋಟ್ ಪ್ಯಾಲೇಸ್ ಪ್ರದೇಶದ ಮಿಂಟೊ ರಸ್ತೆಯಲ್ಲಿ ಶುಕ್ರವಾರ ಎಂಟು ವರ್ಷದ ಬಾಲಕಿಯ ತಂದೆಯ ಸ್ನೇಹಿತನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬಾಲಕಿ ಹಾಗೂ ಆಕೆಯ ಕುಟುಂಬ ಫುಟ್‌ಪಾತ್‌ನಲ್ಲಿ ಜೀವನ ಸಾಗಿಸುತ್ತಿತ್ತು. ಅವರ ಜತೆಗೆ ರಾತ್ರಿಯ ಊಟ ಮಾಡಿದ ಆರೋಪಿ, ಎಲ್ಲರೂ ನಿದ್ರಿಸಿದ ಬಳಿಕ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ತಕ್ಷಣ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದರು. ಸ್ವಲ್ಪ ಹೊತ್ತಿನ ಬಳಿಕ ಮನೆಗೆ ಬಂದ ಬಾಲಕಿ, ಎಲ್ಲ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News